Monday, January 24, 2022

ಪವನ್ ಜಲ್ಲಾದ್ ಗೆ ಲಕ್ಷ ರೂ. ನೀಡುವೆ- ನಟ ಜಗ್ಗೇಶ್

Follow Us

ಬೆಂಗಳೂರು: ಜ.22ರಂದು ನಿರ್ಭಯಾ ಅತ್ಯಾಚಾರ ಅಪರಾಧಿಗಳನ್ನು ಗಲ್ಲಿಗೇರಿಸಲಿರುವ ಉತ್ತರ ಪ್ರದೇಶ ಮೇರಠ್ ನ ‌ಪವನ್ ಜಲ್ಲಾದ್ ಗೆ ಹಿರಿಯ ನಟ ಜಗ್ಗೇಶ್ ಒಂದು‌ ಲಕ್ಷ ರೂ. ನೀಡುವುದಾಗಿ ಘೋಷಿಸಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ದೇಶ ಕಂಟಕರನ್ನು ನಿರ್ನಾಮ ಮಾಡುವವರನ್ನು ಪ್ರೋತ್ಸಾಹಿಸುವುದೂ ಹರಿ ಸೇವೆಯೇ ಎಂದು ಹೇಳಿಕೊಂಡಿದ್ದಾರೆ. ಪವನ್ ಜಲ್ಲಾದ್ ತೀರಾ ಬಡತನದಲ್ಲಿದ್ದು, ನೇಣಿಗೇರಿಸುವ ಕಾರ್ಯಕ್ಕೆ ಉತ್ತರ ಪ್ರದೇಶ ಸರ್ಕಾರ ನೀಡುವ ಒಂದು ಲಕ್ಷ ರೂ.ಗಳನ್ನು ಮಗಳ ಮದುವೆಗೆ ಬಳಸುವುದಾಗಿ ಹೇಳಿದ್ದ. ಈ ಬಗ್ಗೆ‌ ನ್ಯೂಸಿಕ್ಸ್ ಡಾಟ್ ಕಾಮ್ ವರದಿ ಪ್ರಕಟಿಸಿತ್ತು.

ನೇಣಿನ ಹಣವನ್ನು ಮಗಳ‌ ಮದುವೆಗೆ ಬಳಸುವೆ…

* ನಿರ್ಭಯಾ ಕೇಸ್ ಅಪರಾಧಿಗಳನ್ನು ನೇಣಿಗೇರಿಸುವ ಪವನ್ ಜಲ್ಲಾದ್ ಹೇಳಿಕೆ

ಮೇರಠ್: ‘ನನ್ನ ಮಗಳ ‌ಮದುವೆಗೆ ಹಣ ಹೊಂದಿಸುವುದಕ್ಕಾಗಿ ದೇವರೇ ಒದಗಿಸಿದ ಅವಕಾಶ.’
– ನಿರ್ಭಯಾ ಪ್ರಕರಣದ ಅಪರಾಧಿಗಳನ್ನು ಗಲ್ಲಿಗೇರಿಸುವ ಹೊಣೆ ಹೊತ್ತಿರುವ ಉತ್ತರ ಪ್ರದೇಶ ಮೇರಠ್ ನ ಪವನ್ ಜಲ್ಲಾದ್ (57) ಹೇಳಿದ ಮಾತಿದು.
ಮಗಳ‌ ಮದುವೆಗೆ ಹಣ ಹೊಂದಿಸುವುದು ಹೇಗೆಂದು ತಿಳಿಯದೆ ಕಂಗಾಲಾಗಿದ್ದೆ‌. ಮನೆಯೂ ಕುಸಿಯುವ ಹಂತದಲ್ಲಿದೆ. ಸಾಲದ್ದಕ್ಕೆ ಆಗಾಗ ಸಾಲಗಾರರೂ ಮನೆ ಬಳಿ ಬರುತ್ತಿದ್ದಾರೆ. ಈ ವೇಳೆಯಲ್ಲೇ ಉತ್ತರ ಪ್ರದೇಶ ಸರ್ಕಾರ ನಿರ್ಭಯಾ ಪ್ರಕರಣದ ಅಪರಾಧಿಗಳನ್ನು ನೇಣಿಗೇರಿಸುವ ಕೆಲಸವನ್ನು ನನಗೆ ವಹಿಸಿದೆ. ಇದಕ್ಕಾಗಿ ಸರ್ಕಾರ ನನಗೆ ಒಂದು‌ ಲಕ್ಷ ರೂಪಾಯಿ ನೀಡುತ್ತಿದ್ದು, ಈ ಹಣದಲ್ಲಿ ಮಗಳ ‌ಮದುವೆ ಮಾಡುವುದಾಗಿ ಪವನ್ ಹೇಳಿದ್ದಾನೆ.
ನಿರ್ಭಯಾ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ನಾಲ್ವರು ಅಪರಾಧಿಗಳನ್ನು ಜ.22ರಂದು ಗಲ್ಲಿಗೇರಿಸುವಂತೆ ಸುಪ್ರೀಂ ಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಉತ್ತರ ಪ್ರದೇಶ ಪೊಲೀಸ್ ಇಲಾಖೆ ಪವನ್ ಜಲ್ಲಾದ್ ಗೆ ಅಪರಾಧಿಗಳನ್ನು ನೇಣಿಗೇರಿಸುವ ಜವಾಬ್ದಾರಿ ನೀಡಿದೆ.
ನಾನು ಆ ದಿನಕ್ಕಾಗಿ ಸಿದ್ಧತೆ ಮಾಡಿಕೊಳ್ಳುತ್ತಿದ್ದೇನೆ. ಆದರೆ ಅದಕ್ಕೂ ಮೊದಲೇ ಅಪರಾಧಿಗಳನ್ನು ಗಲ್ಲಿಗೇರಿಸಬಹುದು. ಮಾಹಿತಿ ಕೊಡವುದಾಗಿ ಪೊಲೀಸರು ತಿಳಿಸಿದ್ದಾರೆಂದು ಪವನ್ ಹೇಳಿದ್ದಾರೆ.
ಪವನ್ ಜಲ್ಲಾದ್, ಮೇರಠ್ನ ಭೂಮಿಯಪುಲ್ಲಾ ಪ್ರದೇಶದ ಲಕ್ಷ್ಮಣ ಕುಮಾರ್ ಕುಟುಂಬದ ನಾಲ್ಕನೇ ತಲೆಮಾರಿನ ವ್ಯಕ್ತಿ. ಈ ಕುಟುಂಬದವರು ಹ್ಯಾಂಗ್ಮನ್ ಕೆಲಸ ಮಾಡುತ್ತ ಬಂದಿದ್ದಾರೆ.

ಮತ್ತಷ್ಟು ಸುದ್ದಿಗಳು

Latest News

ಆಸ್ಪತ್ರೆಯಲ್ಲಿ ಹೊಡೆದಾಡಿದ ಆಶಾ ಕಾರ್ಯಕರ್ತೆಯರು!

newsics.com ಪಾಟ್ನಾ : ನವಜಾತ ಶಿಶುವಿಗೆ ಚುಚ್ಚು ಮದ್ದು ನೀಡುವ ವಿಚಾರಕ್ಕೆ  ಇಬ್ಬರು ಮಹಿಳಾ ಆಶಾ ಕಾರ್ಯಕರ್ತೆಯರು ಪರಸ್ಪರ ಹೊಡೆದಾಡಿಕೊಂಡಿದ್ದಾರೆ. ಬಿಹಾರದ ಜಮುಯಿ ಸರ್ಕಾರಿ ಆಸ್ಪತ್ರೆಯಲ್ಲಿ ಈ...

ಜಿಲ್ಲಾ ಉಸ್ತುವಾರಿಯಲ್ಲಿ ಹಠಾತ್ ಬದಲಾವಣೆ: ಇಂದಿನಿಂದಲೇ ಜಾರಿ

newsics.com ಬೆಂಗಳೂರು: ಸೋಮವಾರದಿಂದಲೇ(ಜ.24) ಜಾರಿಯಾಗುವಂತೆ ರಾಜ್ಯದಲ್ಲಿನ ಜಿಲ್ಲಾ ಉಸ್ತುವಾರಿಯಲ್ಲಿ ಹಠಾತ್ ಬದಲಾವಣೆ ಮಾಡಲಾಗಿದೆ. ಈ ಸಂಬಂಧ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೊಸ ಆದೇಶ ಹೊರಡಿಸಿದ್ದಾರೆ. ಕಳೆದ ಸೆ.10ರಂದು ಹೊರಡಿಸಲಾಗಿದ್ದ ಜಿಲ್ಲಾ ಉಸ್ತುವಾರಿ ಪಟ್ಟಿ ರದ್ದು ಮಾಡಲಾಗಿದೆ. ಬೆಂಗಳೂರು...

ಎನ್​ಸಿಪಿ ಅಧ್ಯಕ್ಷ ಶರದ್​ ಪವಾರ್’ಗೆ ಕೊರೊನಾ ಸೋಂಕು

newsics.com ದೆಹಲಿ: ಎನ್​ಸಿಪಿ ಅಧ್ಯಕ್ಷ ಶರದ್​ ಪವಾರ್ ಅವರಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ. ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ನನಗೆ ಕೊರೊನಾ ಸೋಂಕು ತಗುಲಿದೆ. ಆತಂಕ ಪಡುವ ಅಗತ್ಯವಿಲ್ಲ ಎಂದಿದ್ದಾರೆ. ಕಳೆದ ಕೆಲವು ದಿನಗಳಿಂದ ನನ್ನ...
- Advertisement -
error: Content is protected !!