ಮುಂಬೈ: ಮಾಜಿ ಪ್ರಧಾನಿ ಇಂದಿರಾ ಗಾಂಧಿ ಭೂಗತ ದೊರೆ ಕರೀಂ ಲಾಲಾ ಅವರನ್ನು ಭೇಟಿಯಾಗುತ್ತಿದ್ದರು ಎಂದು ಶಿವಸೇನೆ ರಾಜ್ಯಸಭಾ ಸಂಜಯ್ ರಾವತ್ ಪ್ರಕಟಿಸಿದ ಬೆನ್ನಲ್ಲೇ ಮತ್ತೊಂದು ಬಾಂಬ್ ಸ್ಫೋಟಗೊಂಡಿದೆ.
ಕರೀಂ ಮೊಮ್ಮಗ ಪ್ರತಿಕ್ರಿಯಿಸಿ, ತಮ್ಮ ಅಜ್ಜನ ಜೊತೆ ಇಂದಿರಾಗಾಂಧಿ ಮಾತ್ರವಲ್ಲ, ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷ ಮುಖ್ಯಸ್ಥ ಶರದ್ ಪವಾರ್ , ಶಿವಸೇನೆ ಮುಖ್ಯಸ್ಥ ಬಾಳಾ ಠಾಕ್ರೆ ಭೇಟಿಯಾಗಿರುವ ಚಿತ್ರಗಳೂ ಕಚೇರಿಯಲ್ಲಿವೆ ಎಂದು ಹೇಳಿಕೆ ನೀಡಿದ್ದಾರೆ.