ಕರಾಚಿ: ತೇಜ್ ಗಾಮ್ ರೈಲಿನಲ್ಲಿ ಸಂಭವಿಸಿದ ಬೆಂಕಿ ದುರಂತದಲ್ಲಿ 65 ಪ್ರಯಾಣಿಕರು ಮೃತಪಟ್ಟು, 50ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ.ಈ ರೈಲು ಲಾಹೋರ್ ಗೆ ತೆರಳುತ್ತಿತ್ತು.
ರೈಲಿನಲ್ಲಿ ಪ್ರಯಾಣಿಕರೊಬ್ಬರು ಸಾಗಿಸುತ್ತಿದ್ದ ಸಿಲಿಂಡರ್ ಸ್ಫೋಟಗೊಂಡದ್ದೇ ದುರಂತಕ್ಕೆ ಕಾರಣ ಎಂದು ಪಾಕ್ ರೈಲ್ವೆ ಅಧಿಕಾರಿ ಸ್ಪಷ್ಟಪಡಿಸಿದ್ದಾರೆ. ರಕ್ಷಣಾ ಕಾರ್ಯಾಚರಣೆ ಮುಮದುವರಿದಿದ್ದು, ಸಾವಿನ ಸಂಖ್ಯೆ ಹೆಚ್ಚುವ ಸಾಧ್ಯತೆಯಿದೆ ಎಂದು ಪಾಕ್ ಮಾಧ್ಯಮಗಳು ವರದಿ ಮಾಡಿವೆ.
ರೈಲು ರಹೀಮ್ ಯಾರ್ ಖಾನ್ ಸಮೀಪದ ಲಿಯಾಖತ್ಪುರಕ್ಕೆ ತಲುಪುವ ಹೊತ್ತಿಗೆ ಮೂರು ಬೋಗಿಗಳಲ್ಲಿ ಬೆಂಕಿ ಕಾಣಿಸಿಕೊಂಡಿತೆಂದು ಹೇಳಲಾಗಿದೆ.