ನವದೆಹಲಿ: ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಸಭೆಯಲ್ಲಿ ಭಾರತ ಮತ್ತೊಮ್ಮೆ ಪಾಕಿಸ್ತಾನದ ವಿರುದ್ಧ ವಾಗ್ದಾಳಿ ನಡಡಸಿದೆ.
ಪಾಕ್ ಈಗಲೂ ಉಗ್ರವಾದಕ್ಕೆ ಪ್ರೋತ್ಸಾಹ ನೀಡುತ್ತಿದ್ದು, ಪಾಕ್ ಪ್ರತಿನಿಧಿಗಳು ಸ್ವಾರ್ಥಕ್ಕಾಗಿ ಸುಳ್ಳುಗಳನ್ನು ಪ್ರತಿಪಾದಿಸುತ್ತಾರೆ ಎಂದು ಭಾರತ ಆರೋಪಿಸಿದೆ.
ಪಾಕ್ ನ ವಿಶ್ವಸಂಸ್ಥೆಯ ರಾಯಭಾರಿ ಮುನೀರ್ ಅಕ್ರಮ್ ಮಾತನಾಡಿ, ಭಾರತ, ಪಾಕ್ ವಿರುದ್ಧ ಮತ್ತೊಂದು ಮಿಲಿಟರಿ ಸಾಹಸಕ್ಕೆ ಕೈ ಹಾಕಬಹುದು. ಒಂದು ವೇಳೆ ದಾಳಿ ನಡೆದರೆ ಪಾಕಿಸ್ತಾನ ಕೂಡ ತಕ್ಕ ಉತ್ತರ ನೀಡಲಿದೆ. ಆದರೆ, ನಮಗೆ ಯುದ್ಧ ಬೇಕಾಗಿಲ್ಲ ಎಂದರು.
ಪಾಕ್ ವಾದವನ್ನು ತಿರಸ್ಕರಿಸಿದ ವಿಶ್ವಸಂಸ್ಥೆಯ ಭಾರತದ ಪ್ರತಿನಿಧಿ ಸೈಯದ್ ಅಕ್ಬರುದ್ದೀನ್, ಪಾಕ್ ತನ್ನ ಒಳಬೇನೆಯನ್ನು ವಾಸಿಮಾಡಿಕೊಳ್ಳಬೇಕಾಗಿದೆ. ನಿಮ್ಮ ಸೋಂಕನ್ನು ಸ್ವೀಕರಿಸಲು ಇಲ್ಲಿ ಯಾರೂ ಇಲ್ಲ ಎಂದು ತಿರುಗೇಟು ನೀಡಿದರು.
ಪಾಕ್ ವಿರುದ್ಧ ಭಾರತ ಮತ್ತೆ ವಾಗ್ದಾಳಿ
Follow Us