Sunday, January 17, 2021

ಪಾಸ್ ಪೋರ್ಟ್ ನಲ್ಲಿ ಕಮಲದ ಚಿಹ್ನೆ: ಸ್ಪಷ್ಟನೆ ನೀಡಿದ ವಿದೇಶಾಂಗ ಇಲಾಖೆ

ನವದೆಹಲಿ: ಹೊಸ ಪಾಸ್ ಪೋರ್ಟ್ ನ ಮೇಲೆ ಕಮಲದ ಚಿಹ್ನೆ ಇರುವುದು ಆಕ್ರೋಶಕ್ಕೆ ಕಾರಣವಾಗಿದೆ. ಕೇರಳದ ಸಂಸತ್ ಸದಸ್ಯರೊಬ್ಬರು ಇದನ್ನು ಸಂಸತ್ ನಲ್ಲಿ ಕೂಡ ಪ್ರಸ್ತಾಪಿಸಿದ್ದರು. ಇದು ಹಿಂದುತ್ವ ಹೇರಿಕೆಯ ಭಾಗ ಎಂದು ಟೀಕಿಸಿದ್ದರು. ಈ ಆರೋಪಗಳಿಗೆ ವಿದೇಶಾಂಗ ಇಲಾಖೆ ಸ್ಪಷ್ಟೀಕರಣ ನೀಡಿದೆ. ಭದ್ರತೆಯ ಕಾರಣದಿಂದ ಕಮಲದ ಚಿತ್ರವನ್ನು ಪಾಸ್ ಪೋರ್ಟ್ ಮೇಲೆ ಲಗತ್ತಿಸಲಾಗಿದೆ. ಕಮಲ ಭಾರತದ ರಾಷ್ಟ್ರೀಯ ಹೂ. ಅದೇ ರೀತಿ ಸರದಿಯಂತೆ ಮುಂದಿನ ದಿನಗಳಲ್ಲಿ ಇತರ ರಾಷ್ಟ್ರೀಯ ಚಿಹ್ನೆಗಳನ್ನು ಬಳಸಲಾಗುವುದು ಎಂದು ವಿದೇಶಾಂಗ ಇಲಾಖೆ ಸ್ಪಷ್ಟಪಡಿಸಿದೆ. ಬಿಜೆಪಿಯ ಚಿಹ್ನೆ ಕೂಡ ಕಮಲ ಆಗಿರುವ ಹಿನ್ನೆಲೆಯಲ್ಲಿ ಈ ವಿವಾದ ತಲೆದೋರಿತ್ತು.

ಮತ್ತಷ್ಟು ಸುದ್ದಿಗಳು

Latest News

ರಾಜ್ಯದಲ್ಲಿ ಜ.18ರಿಂದ ಗೋ ಹತ್ಯೆ ನಿಷೇಧ ಜಾರಿ- ಸಚಿವ ಚವ್ಹಾಣ್

newsics.com ಬೆಂಗಳೂರು: ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಸಂರಕ್ಷಣಾ ಅಧ್ಯಾದೇಶ ಜ.18ರಿಂದ ರಾಜ್ಯದಲ್ಲಿ ಜಾರಿಯಾಗಲಿದೆ.ಪಶುಸಂಗೋಪನೆ ಹಜ್ ಮತ್ತು ವಕ್ಫ್ ಸಚಿವ ಪ್ರಭು ಚವ್ಹಾಣ್...

ಸೈನಿಕರಿಬ್ಬರಿಂದ ಸಹೋದ್ಯೋಗಿಗಳ ಮೇಲೆ ಗುಂಡಿನ ದಾಳಿ; 12 ಯೋಧರು ಸಾವು

newsics.com ಕಾಬೂಲ್ (ಅಫ್ಘಾನಿಸ್ತಾನ): ಅಫ್ಘಾನಿಸ್ತಾನದ ಹೆರಾತ್ ಪ್ರಾಂತ್ಯದಲ್ಲಿ ಶುಕ್ರವಾರ ಬಾಡಿಗೆ ಸೇನೆಯೊಂದರ ಇಬ್ಬರು ಸೈನಿಕರು ತಮ್ಮ ಸಹೋದ್ಯೋಗಿಗಳ ಮೇಲೆ ನಡೆಸಿದ ಗುಂಡಿನ ದಾಳಿಯಲ್ಲಿ 12 ಮಂದಿ ಮೃತಪಟ್ಟಿದ್ದಾರೆ.ಬಾಡಿಗೆ ಸೈನಿಕರ ಶಸ್ತ್ರಾಸ್ತ್ರಗಳು...

ದೆಹಲಿಯೂ ಸೇರಿ ದೇಶದ ಹಲವೆಡೆ ಕೊರೋನಾ ಲಸಿಕೆ ಅಡ್ಡಪರಿಣಾಮ

newsics.com ನವದೆಹಲಿ: ದೆಹಲಿಯೂ ಸೇರಿದಂತೆ ದೇಶದ ಹಲವೆಡೆ ಶನಿವಾರ (ಜ.16) ಕೊರೋನಾ ಲಸಿಕೆ ಪಡೆದ ಕೆಲವರಲ್ಲಿ ಅಡ್ಡಪರಿಣಾಮ ಕಂಡುಬಂದಿದೆ.ದೆಹಲಿಯಲ್ಲಿ ಲಸಿಕೆ ಪಡೆದ 51 ಮಂದಿಯಲ್ಲಿ ಅಡ್ಡಪರಿಣಾಮಗಳು ಕಾಣಿಸಿಕೊಂಡಿವೆ. ನವದೆಹಲಿಯಲ್ಲಿ ಶನಿವಾರ...
- Advertisement -
error: Content is protected !!