ನವದೆಹಲಿ: ಕಾಶ್ಮೀರದಲ್ಲಿ ಕೈಗೊಳ್ಳಬೇಕಾದ ಹಲವು ಕ್ರಮಗಳು ನಮ್ಮ ಬಳಿ ಇವೆ. ನಾವು ಎಲ್ಲಕ್ಕೂ ಸಿದ್ಧರಿದ್ದೇವೆ ಎಂದು ಸೇನೆಯ ನೂತನ ಮುಖ್ಯಸ್ಥ ಜನರಲ್ ಮನೋಜ್ ಮುಕುಂದ್ ನರಾವಣೆ ಹೇಳಿದ್ದಾರೆ.
ಖಾಸಗಿ ಚಾನಲ್ನ ಸಂದರ್ಶನವೊಂದರಲ್ಲಿ ಮಾತನಾಡಿರುವ ಅವರು, ಈಗಗಲೇ ನಮ್ಮ ಸೇನಾ ಪಡೆಗಳನ್ನು ಜಮ್ಮು ಮತ್ತು ಕಾಶ್ಮೀರ ಸೇರಿದಂತೆ ಎಲ್ಲ ಗಡಿಯಲ್ಲಿ ನಿಯೋಜಿಸಲಾಗಿದೆ. ಪಾಕ್ ಆಕ್ರಮಿತ ಕಶ್ಮೀರ ಹಾಗೂ ಗಡಿಯಲ್ಲಿ ಸೂಕ್ತ ಕ್ರಮ ಕೈಗೊಳ್ಳಲು ನಮ್ಮಲ್ಲಿ ವಿವಿಧ ಯೋಜನೆಗಳಿವೆ. ಅಗತ್ಯವಿದ್ದರೆ, ಆ ಯೋಜನೆಗಳನ್ನು ಕಾರ್ಯರೂಪಕ್ಕೆ ತರಬಹುದು. ನಾವು ಮಾಡಬೇಕಾದ ಯಾವುದೇ ಕೆಲಸವನ್ನು ನಾವು ಯಶಸ್ವಿಯಾಗಿ ನಿರ್ವಹಿಸುತ್ತೇವೆ ಎಂದು ನರಾವಣೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಪರಿಸ್ಥಿತಿ ಬಂದರೆ ಭಯೋತ್ಪಾದನೆ ವಿರುದ್ಧ ಎಂತಹ ನೀತಿ ಅನುಸರಿಸಲು ನಾವು ಸಿದ್ಧ ಎಂದು ಪಾಕಿಸ್ತಾನಕ್ಕೆ ಖಡಕ್ ಎಚ್ಚರಿಕೆ ನೀಡಿದ್ದಾರೆ.
ಪಿಒಕೆ ಸೇರಿ ದೇಶದ ಗಡಿಯಲ್ಲಿ ಎಲ್ಲ ಕ್ರಮಕ್ಕೂ ಸೈ- ಸೇನಾ ಮುಖ್ಯಸ್ಥ
Follow Us