Sunday, May 16, 2021

ಪೌರತ್ವ ತಿದ್ದುಪಡಿ ಮಸೂದೆ: ಇಂದು ಲೋಕಸಭೆಯಲ್ಲಿ ಮಂಡನೆ

ನವದೆಹಲಿ:  ವಿವಾದದ ಕಿಡಿ ಹೊತ್ತಿಸಿರುವ ಪೌರತ್ವ ತಿದ್ದುಪಡಿ ಮಸೂದೆಯನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಇಂದು ಲೋಕಸಭೆಯಲ್ಲಿ ಮಂಡಿಸಲಿದ್ದಾರೆ. ಭಾರತದ ನೆರೆಯ ದೇಶಗಳಿಂದ ವಲಸೆ ಬಂದಿರುವ ಮುಸ್ಲಿಂಮೇತರ ನಾಗರಿಕರಿಗೆ ಪೌರತ್ವ ನೀಡುವ ಪ್ರಸ್ತಾಪ ಇದು ಒಳಗೊಂಡಿದೆ.  2014 ಡಿಸೆಂಬರ್ 31ರೊಳಗೆ ಬಂದವರಿಗೆ ಇದು ಅನ್ವಯವಾಗಲಿದೆ. ತಿದ್ದುಪಡಿ ಮಸೂದೆಯಲ್ಲಿ ಮುಸ್ಲಿಂರನ್ನು ಸೇರಿಸದಿರುವುದಕ್ಕೆ ಪ್ರತಿಪಕ್ಷಗಳು ಆಕ್ಷೇಪ  ವ್ಯಕ್ತಪಡಿಸಿವೆ. ಈಶಾನ್ಯ ರಾಜ್ಯಗಳಲ್ಲಿ ಕೂಡ  ತಿದ್ದುಪಡಿ ಮಸೂದೆಗೆ ತೀವ್ರ ವಿರೋಧ ವ್ಯಕ್ತವಾಗಿದೆ. ಡಿಸೆಂಬರ್ 10ಕ್ಕೆ  ವಿದ್ಯಾರ್ಥಿ ಸಂಘಟನೆಗಳು ಬಂದ್ ಗೆ ಕರೆ ನೀಡಿವೆ.

ಮತ್ತಷ್ಟು ಸುದ್ದಿಗಳು

Latest News

ಆತಂಕದಿಂದ ನನಗೂ ಹಲವು ರಾತ್ರಿ ನಿದ್ದೆಯಿರಲಿಲ್ಲ: ತೆಂಡೂಲ್ಕರ್

newsics.com ಮುಂಬೈ: ನನ್ನ 24 ವರ್ಷಗಳ ವೃತ್ತಿಜೀವನದ ಹೆಚ್ಚಿನ ಸಮಯ ಆತಂಕದ ಕ್ಷಣಗಳನ್ನು ಎದುರಿಸಿದ್ದೆ. ಹಲವು ರಾತ್ರಿ ನಿದ್ದೆಯೇ ಇರಲಿಲ್ಲ ಎಂದು ಕ್ರಿಕೆಟ್ ಜೀವಂತ ದಂತಕತೆ...

ಡಿಆರ್’ಡಿಒದ ಆ್ಯಂಟಿ ಕೊರೋನಾ ಔಷಧ ನಾಳೆ ಬಿಡುಗಡೆ

newsics.com ನವದೆಹಲಿ: ರಕ್ಷಣಾ ಸಂಶೋಧನೆ ಹಾಗೂ ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ಅಭಿವೃದ್ಧಿಪಡಿಸಿದ ಆ್ಯಂಟಿ-ಕೊರೋನಾವೈರಸ್ ಔಷಧ ಸೋಮವಾರ(ಮೇ 17) ಬಿಡುಗಡೆಯಾಗಲಿದೆ. ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ದೆಹಲಿಯ ಕೆಲವು ಆಸ್ಪತ್ರೆಗಳಿಗೆ ಸುಮಾರು 10,000 ಡೋಸ್‌ಗಳನ್ನು ವಿತರಿಸಲಿದ್ದಾರೆ. 2-ಡಿಯೋಕ್ಸಿ-ಡಿ-ಗ್ಲೂಕೋಸ್...

ವಾರದ ಎಲ್ಲ ದಿನ ಪಡಿತರ ಅಂಗಡಿ ತೆರೆಯಲು ಕೇಂದ್ರ ಸರ್ಕಾರ ಸೂಚನೆ

newsics.com ನವದೆಹಲಿ: ಲಾಕ್'ಡೌನ್ ವೇಳೆ ಫಲಾನುಭವಿಗಳಿಗೆ ಸಮರ್ಪಕವಾಗಿ ಪಡಿತರ ಸಿಗುತ್ತಿಲ್ಲವೆಂಬ ದೂರುಗಳ ಹಿನ್ನೆಲೆಯಲ್ಲಿ ವಾರದ ಎಲ್ಲ ದಿನವೂ ಪಡಿತರ ಅಂಗಡಿಗಳನ್ನು ತೆರೆಯುವಂತೆ ಕೇಂದ್ರ ಸರ್ಕಾರ ರಾಜ್ಯಗಳಿಗೆ ಸೂಚನೆ ನೀಡಿದೆ. ವಾರದ ಎಲ್ಲಾ ದಿನಗಳಲ್ಲೂ ನ್ಯಾಯಬೆಲೆ ಅಂಗಡಿಗಳನ್ನು...
- Advertisement -
error: Content is protected !!