ಮುಂಬೈ: ವಿವಾದೀತ ಪೌರತ್ವ ತಿದ್ದುಪಡಿ ಮಸೂದೆ ವಿರೋಧಿಸಿ ಹಿರಿಯ ಐಪಿಎಸ್ ಅಧಿಕಾರಿ ಅಬ್ದುರ್ ರೆಹಮಾನ್ ರಾಜೀನಾಮೆ ನೀಡಿದ್ದಾರೆ. ಅಬ್ದುರ್ ರೆಹಮಾನ್ ಮಹಾರಾಷ್ಟ್ರದಲ್ಲಿ ಹಿರಿಯ ಪೊಲೀಸ್ ಅಧಿಕಾರಿಯಾಗಿದ್ದಾರೆ. ಈ ಮಸೂದೆ ಭಾರತದ ಬಹು ಸಂಸ್ಕೃತಿಗೆ ವಿರುದ್ಧ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಈ ಮಧ್ಯೆ ಇದಕ್ಕೆ ವಿರೋಧ ಕೂಡ ವ್ಯಕ್ತವಾಗಿದೆ. ಅಬ್ದುರ್ ರೆಹಮಾನ್ ಬಹಳ ಹಿಂದೆಯೇ ಸ್ವಯಂ ನಿವೃತ್ತಿ ಯೋಜನೆಗೆ ಅರ್ಜಿ ಹಾಕಿದ್ದರು. ಇದು ಒಂದು ನೆಪ ಅಷ್ಟೇ ಎಂಬ ಟೀಕೆ ಕೂಡ ಕೇಳಿ ಬಂದಿದೆ.