ನವದೆಹಲಿ; ಪ್ಯಾನ್ ಮತ್ತು ಆಧಾರ್ ಸಂಖ್ಯೆಯನ್ನು ಜೋಡಿಸುವ ಗಡುವನ್ನು 2020ರ ಮಾರ್ಚ್ ವರೆಗೆ ವಿಸ್ತರಿಸಲಾಗಿದೆ ಎಂದು ಸಿಬಿಡಿಟಿ ತಿಳಿಸಿದೆ. ಇದಕ್ಕೂ ಮುನ್ನ ಈ ಗಡುವು ಡಿ.31ಕ್ಕೆ ಅಂತ್ಯಗೊಳ್ಳುತ್ತಿತ್ತು.
1961ರ ಆದಾಯ ತೆರಿಗೆ ಕಾಯ್ದೆಯ 139 ಎಎ ಸೆಕ್ಷನ್ ಹಾಗೂ 2ನೇ ಉಪ ಸೆಕ್ಷನ್ ಅಡಿಯಲ್ಲಿ ಆಧಾರ್ ಹಾಗೂ ಪ್ಯಾನ್ ಸಂಖ್ಯೆಯನ್ನು ಕಡ್ಡಾಯವಾಗಿ ಜೋಡಿಸುವ ಗಡುವನ್ನು ಮಾ. 31ರವರೆಗೆ ವಿಸ್ತರಿಸಲಾಗಿದೆ ಎಂದು ಕಚೇರಿಯ ಅಧಿಕೃತ ಟ್ವಿಟರ್ ಖಾತೆ ತಿಳಿಸಿದೆ.