Tuesday, May 18, 2021

ಪ್ರಿಯಕರನ ಕೆನ್ನೆಯ ಹೊಡೆತಕ್ಕೆ ಬಲಿಯಾದ ಪ್ರಿಯತಮೆ

ಮುಂಬೈ: ತನ್ನ ಪ್ರಿಯತಮೆ ಇನ್ನೊಬ್ಬನ ಹತ್ತಿರ ಮಾತನಾಡುವುದನ್ನು ಸಹಿಸದ ಪ್ರಿಯಕರ ಆಕೆಯ ಕೆನ್ನೆಗೆ ಬಾರಿಸಿದ್ದಾನೆ. ಪೆಟ್ಟಿನ ಆಘಾತಕ್ಕೆ ಪ್ರಿಯತಮೆ ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಸಾವನ್ನಪ್ಪಿದ್ಧಾಳೆ. ಈ ಘಟನೆ ನಡೆದದ್ದು ಮುಂಬೈ ಸಮೀಪದ ಮರ್ಕಂಡ್ ರೈಲು ನಿಲ್ದಾಣದ ಬಳಿ. ಮೃತಪಟ್ಟವಳನ್ನು  ಸೀತಾ ಪ್ರಧಾನ್ ಎಂದು ಗುರುತಿಸಲಾಗಿದೆ. ಆಕೆಯ ಪ್ರಿಯಕರ ರಾಜು ಪೂಜಾರಿಯನ್ನು ಪೊಲೀಸರು ಬಂಧಿಸಿದ್ದಾರೆ. ರಾಜು ಮತ್ತು ಸೀತಾ ಪ್ರಧಾನ್ ಪರಸ್ಪರ ಪ್ರೀತಿಸುತ್ತಿದ್ದರು ಎಂದು ಹೇಳಲಾಗಿದೆ. ಆದರೆ ಮರ್ಕಂಡ್ ರೈಲು ನಿಲ್ದಾಣದಲ್ಲಿ ಆಕೆ ಇನ್ನೊಬ್ಬನ ಜತೆ ಮಾತಾನಾಡುತ್ತಿದ್ದಾಗ ರಾಜು ಆಕೆಯ ಕೆನ್ನೆಗೆ ಬಲವಾಗಿ ಹೊಡೆದಿದ್ದಾನೆ. ಘಟನೆಯಿಂದ ತೀವ್ರ ಆಘಾತಗೊಂಡ ಸೀತಾ ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಸಾವನ್ನಪ್ಪಿದ್ಧಾಳೆ.

ಮತ್ತಷ್ಟು ಸುದ್ದಿಗಳು

Latest News

ಎಂಟು ಕೋಟಿ ಕೊರೋನಾ ಲಸಿಕೆ ರಫ್ತು: ಅಮೆರಿಕ ಘೋಷಣೆ

newsics.com ವಾಷಿಂಗ್ಟನ್: ಮಾರಕ ಕೊರೋನಾ ವಿರುದ್ದದ ಹೋರಾಟದಲ್ಲಿ ಕೈ ಜೋಡಿಸಲು ಮುಂದೆ ಬಂದಿರುವ ಅಮೆರಿಕ ವಿಶ್ವದ ಇತರ ರಾಷ್ಟ್ರಗಳಿಗೆ ಎಂಟು ಕೋಟಿ ಕೊರೋನಾ ಲಸಿಕೆ ನೀಡುವುದಾಗಿ ಘೋಷಿಸಿದೆ. ಅಮೆರಿಕ...

ಜಾಮೀ‌ನಿಗೆ ತಡೆ ನೀಡಿದ ಕೋಲ್ಕತಾ ಹೈಕೋರ್ಟ್: ಸಚಿವರಿಬ್ಬರು ಸೇರಿ ನಾಲ್ವರಿಗೆ ಜೈಲುವಾಸ

newsics.com ಕೋಲ್ಕತಾ: ನಾರದಾ ಕುಟುಕು ಕಾರ್ಯಾಚರಣೆ ಪ್ರಕರಣದ ಸಂಬಂಧ ಸೆಂಟ್ರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್(ಸಿಬಿಐ) ಬಂಧಿಸಿರುವ ಪಶ್ಚಿಮ ಬಂಗಾಳದ ಇಬ್ಬರು ಸಚಿವರು ಮತ್ತು ಇಬ್ಬರು ಮುಖಂಡರ ಜಾಮೀನು ಅರ್ಜಿಗಳಿಗೆ ಕೊಲ್ಕತ್ತಾ ಹೈಕೋರ್ಟ್ ತಡೆ...

ನಾಳೆ ಬೆಂಗಳೂರಿಗೆ ಬರಲಿದೆ 120 ಮೆಟ್ರಿಕ್ ಟನ್ ಆಕ್ಸಿಜನ್

newsics.com ಬೆಂಗಳೂರು: 120 ಮೆಟ್ರಿಕ್ ಟನ್ ಮೆಡಿಕಲ್ ಆಕ್ಸಿಜನ್ ಹೊತ್ತ ನಾಲ್ಕನೇ ಎಕ್ಸ್'ಪ್ರೆಸ್ ರೈಲು ಮಂಗಳವಾರ(ಮೇ 18) ಬೆಳಗ್ಗೆ ಬೆಂಗಳೂರು ತಲುಪಲಿದೆ. ಜೆಮ್'ಷೆಡ್'ಪುರದ ಟಾಟಾ ನಗರದಿಂದ ಆರು ಆಕ್ಸಿಜನ್ ಕಂಟೇನರ್ ಗಳನ್ನು ಹೊತ್ತ ಈ ರೈಲು...
- Advertisement -
error: Content is protected !!