ಕಾಸರಗೋಡು: ಇದು ಅತ್ಯಂತ ನಂಬಿಕೆಯ ಶ್ರದ್ಧಾ ಕೇಂದ್ರ. ಜಗಳ ಮಾಡುವಾಗ ಅಪ್ಪಿ ತಪ್ಪಿಯೂ ಈ ದೈವಸ್ಥಾನದ ಹೆಸರನ್ನು ಯಾರೂ ಕೂಡ ಹೇಳುವುದಿಲ್ಲ. ನ್ಯಾಯಾಲಯಗಳಲ್ಲಿ ಇತ್ಯರ್ಥವಾಗದೇ ಉಳಿದ ಹಲವು ಪ್ರಕರಣಗಳು ಇಲ್ಲಿ ಪರಸ್ಪರ ಒಪ್ಪಿಗೆಯಿಂದ ಸೌಹಾರ್ದಯುತವಾಗಿ ಬಗೆ ಹರಿದ ನಿದರ್ಶನಗಳಿವೆ. ಪ್ರೇತ ವಿಮೋಚನೆಗೆ ಕೂಡ ಈ ದೈವಸ್ಥಾನ ಹೆಸರುವಾಸಿ. ಇದೀಗ ಕಾಸರಗೋಡಿನ ಮುಳಿಯಾರ್ ಸಮೀಪದ ಕಾನತ್ತೂರ್ ನಾಲ್ವರ್ ದೈವಸ್ಥಾನದಲ್ಲಿ ಇಂದಿನಿಂದ ಕಳಿಯಾಟ ಮಹೋತ್ಸವ. ಜನವರಿ 2 ರ ವರೆಗೆ ಕಳಿಯಾಟ ನಡೆಯಲಿದೆ. ಅಂದೇ ಪ್ರೇತಗಳ ವಿಮೋಚನೆ ಕೂಡ ನೆರವೇರಲಿದೆ