ಕೊಟ್ಟಾಯಂ: ಕೇರಳದ ಕುಮರ್ಕೋಂ ದೇಶದ ಮೊದಲ ಪ್ಲಾಸ್ಟಿಕ್ ಮುಕ್ತ ಪ್ರವಾಸಿ ತಾಣ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಚೇಂಬರ್ ಆಫ್ ವೆಂಬನಾಡ್ ಹೋಟೆಲ್ ಮತ್ತು ರೆಸ್ಟಾರ್ಟ್ (ಸಿವಿಎಚ್ಆರ್), ಕೇರಳ ದೋಣಿ ಮಾಲೀಕರ ಸಂಘ ಹಾಗೂ ಕೇರಳ ಪ್ರಯಾಣಿಕ ಸಂಘ ಜಂಟಿಯಾಗಿ, ಪ್ರವಾಸಿ ತಾಣದಲ್ಲಿ ಪ್ಲಾಸ್ಟಿಕ್ ಬಳಕೆ ಕುರಿತು ನಿರಂತರ ಜಾಗೃತಿ ಮೂಡಿಸುತ್ತಿದೆ.
ಈ ಮೊದಲು ಇಲ್ಲಿನ 70 ಕೊಠಡಿಗಳ ಹೋಟೆಲ್ ನಲ್ಲಿ ಸುಮಾರು 150 – 200 ಪ್ಲಾಸ್ಟಿಕ್ ಬಾಟಲ್ ಗಳನ್ನು ಬಳಸಲಾಗುತ್ತಿತ್ತು. ಇದೀಗ ಅದನ್ನು ಸಂಪೂರ್ಣವಾಗಿ ನಿಯಂತ್ರಿಸಲಾಗಿದೆ. ಪ್ರವಾಸಿಗರಿಂದ ಕೂಡ ಈ ಪ್ರಯತ್ನಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.