ನವದೆಹಲಿ:ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸೋಮವಾರ 2020-21ನೇ ಸಾಲಿನ ಸಾರ್ವತ್ರಿಕ ಬಜೆಟ್ ಹಿನ್ನೆಲೆಯಲ್ಲಿ ವಿವಿಧ ಷೇರುದಾರ ಗುಂಪುಗಳ ಜೊತೆಗಿನ ಬಜೆಟ್ ಪೂರ್ವ ಸಂವಾದ ಆರಂಭಿಸಿದರು.
ತಮ್ಮ ಪ್ರಥಮ ಸಭೆಯಲ್ಲಿ ಅವರು ಡಿಜಿಟಲ್ ಆರ್ಥಿಕತೆಯ ಷೇರುದಾರರಾದ ಫಿನ್ ಟೆಕ್ ಮತ್ತು ಸ್ಟಾರ್ಟ್ ಅಪ್ ಗಳೊಂದಿಗೆ ಚರ್ಚೆ ನಡೆಸಿದರು. ಚರ್ಚೆಯಲ್ಲಿ ಬೃಹತ್ ದತ್ತಾಂತ ತಂತ್ರಜ್ಞಾನ, ಅವುಗಳ ವಿಶ್ಲೇಷಣೆ, ಸಣ್ಣ ಮತ್ತು ಮಧ್ಯಮ ಉದ್ಯಮಗಳಲ್ಲಿ ಬೃಹತ್ ದತ್ತಾಂಶ ತಂತ್ರಜ್ಞಾನಗಳ ಬಳಕೆ ಮತ್ತು ಸಾರ್ವಜನಿಕ ಆಡಳಿತದಲ್ಲಿ ಇವುಗಳ ಶಕ್ತಿಯ ಉಪಯೋಗದ ಕುರಿತು ಚರ್ಚೆ ನಡೆಸಿದರು.
.