ಅಯೋಧ್ಯೆ: ಬಾಬ್ರಿ ಮಸೀದಿ ಧ್ವಂಸಗೊಳಿಸಿ ಇಂದಿಗೆ 27 ವರ್ಷವಾಗಿದ್ದು ಅಯೋಧ್ಯೆಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.
ಕರಸೇವಕರು 1992 ಡಿ.6ರಂದು ಮಸೀದಿ ಧ್ವಂಸಗೊಳಿಸಿದ್ದರು. ಫೈಜಾಬಾದ್ ಜಿಲ್ಲೆಯನ್ನು ಸೂಕ್ಷ್ಮ ಎಂದು ಘೋಷಿಸಿ 4 ಭದ್ರತಾ ವಲಯ, 10 ಉಪ ವಲಯಗಳನ್ನಾಗಿ ವಿಂಗಡಿ ಪೊಲೀಸರನ್ನು ನಿಯೋಜಿಸಿ ಕಟ್ಟೆಚ್ಚರ ಇಡಲಾಗಿದೆ ಎಂದು ಜಿಲ್ಲಾ ಮ್ಯಾಜಿಸ್ಟ್ರೇಟ್ ಅನುಜ್ ಕುಮಾರ್ ತಿಳಿಸಿದ್ದಾರೆ.
ಬಾರಾಬಂಕಿ, ಗೊಂಡಾ, ಬಲರಾಂಪುರ್, ಅಂಬೇಡ್ಕರ್ ನಗರ, ಸುಲ್ತಾನಪುರ, ಅಮೆಥಿ ಹಾಗೂ ರಾಯ್ಬರೇಲಿ ಮತ್ತು ತಿವಾರಿ ಗಡಿ ಹಾಗೂ ಆಯಕಟ್ಟಿನ ಸ್ಥಳಗಳಲ್ಲಿ ಹೆಚ್ಚುವರಿ ಪೊಲೀಸರನ್ನು ನಿಯೋಜಿಸಲಾಗಿದೆ. ಅಯೋಧ್ಯೆಯಲ್ಲಿ 10ಕ್ಕೂ ಹೆಚ್ಚು ತಾತ್ಕಾಲಿಕ ಜೈಲು ಕೊಠಡಿಗಳನ್ನು ತೆರೆಯಲಾಗಿದೆ.
ಬಾಬ್ರಿ ಮಸೀದಿ ಧ್ವಂಸಕ್ಕೆ 27 ವರ್ಷ; ಅಯೋಧ್ಯೆಯಲ್ಲಿ ಕಟ್ಟೆಚ್ಚರ
Follow Us