ನವದೆಹಲಿ: ಈತ ಆರು ವರ್ಷದ ಬಾಲಕ. ಈತನ ಬೆನ್ನ ಮೇಲೆ ಕೂದಲಿನಲ್ಲಿ ರೂಪುಗೊಂಡ ಬಾಲವಿದೆ, ಹಲವರಿಗೆ ಈತನನ್ನು ಪೂಜಿಸುವ ಆಸೆ…
– ಬಾಲಕನ ಕೂದಲಿನ ಬಾಲವೇ ಪಾಲಕರಿಗೆ ಸಮಸ್ಯೆಯಾಗಿದೆ. ಹೀಗಾಗಿ ಬಾಲಕನನ್ನು ಪೋಷಕರು ಬಚ್ಚಿಡುತ್ತಿದ್ದಾರೆ. ಆದರೂ ಬಾಲಕನಿಗೆ ಚಾಕಲೇಟ್ ಮತ್ತಿತರ ತಿಂಡಿಯ ಅಸೆ ತೋರಿಸಿ ಕದ್ದುಮುಚ್ಚಿ ಪೂಜೆ ಮಾಡುತ್ತಿದ್ದಾರೆ.
ಈ ಬಾಲಕನ ಹೆಸರು ಶಿವಕುಮಾರ್. ಹುಟ್ಟಿನಿಂದಲೇ ಈತನಿಗೆ ಬೆನ್ನ ಮೇಲೆ ಕೂದಲಿನ ಬಾಲವಿದೆ. ನೆರೆಹೊರೆಯವರು ಈತನನ್ನು ಹನುಮಂತನ ಅವತಾರವೆಂದೇ ತಿಳಿದಿದ್ದಾರೆ. ಬಾಲಕ ಬೆಳೆಯುತ್ತಿದ್ದಂತೆ ಕೂದಲಿನ ಬಾಲವೂ ಬೆಳೆಯುತ್ತಿದೆ. ಅದು ಹುಟ್ಟಿದಾಗಿನಿಂದ ಇರುವ ಕಾರಣ ದೇವರೇ ಕೊಟ್ಟಿದ್ದು, ಕತ್ತರಿಸಿದರೆ ಕುಟುಂಬಕ್ಕೆ ಕೇಡಾಗುತ್ತದೆ ಎಂಬ ನಂಬಿಕೆ ಆತನ ಪಾಲಕರದ್ದು. ಹಾಗಾಗಿಯೇ ಅದನ್ನು ಬಿಟ್ಟಿದ್ದಾರೆ.
ಬಾಲದ ಬಾಲಕನಿಗೆ ಪೂಜೆ!
Follow Us