* ಹೆಲ್ಮೆಟ್ ಧರಿಸಿ ಈರುಳ್ಳಿ ಮಾರಾಟ, ಖರೀದಿ
ಪಾಟ್ನಾ: ದೇಶಾದ್ಯಂತ ಈರುಳ್ಳಿ ಬೆಲೆ ಗಗನಕ್ಕೇರಿದೆ. ಒಂದುಕೆಜಿ ಈರುಳ್ಳಿ ನೂರು ರೂ.ಗೆ ಮಾರಾಟವಾಗುತ್ತಿದೆ. ಆದರೆ ಇಲ್ಲಿ ಮಾತ್ರ ಕೆಜಿ ಈರುಳ್ಳಿಗೆ 35 ರೂ.!ಕಡಿಮೆ ದರದ ಈರುಳ್ಳಿ ಖರೀದಿಗೆ ಮುಗಿಬಿದ್ದಿದ್ದು, ನೂಕುನುಗ್ಗಲು ಉಂಟಾಗಿದೆ. ಕೆಲವೆಡೆ ಕಲ್ಲು ತೂರಾಟವೂ ನಡೆದಿದೆ. ಹೀಗಾಗಿ, ಈರುಳ್ಳಿ ಮಾರಾಟ ಸಿಬ್ಬಂದಿ ಮುಂಜಾಗ್ರತಾ ಕ್ರಮವಾಗಿ ಹೆಲ್ಮೆಟ್ ಧರಿಸಿ ಕಾರ್ಯನಿರ್ವಹಿಸುತ್ತಿದ್ದಾರೆ. ಕೆಲವರು ಹೆಲ್ಮೆಟ್ ಧರಿಸಿಯೇ ಈರುಳ್ಳಿ ಖರೀದಿಗೆ ಮುಂದಾಗಿದ್ದಾರೆ. ಬಿಹಾರದಲ್ಲಿ ಸಹಕಾರಿ ಸಂಸ್ಥೆಗಳ ಮೂಲಕ ಈರುಳ್ಳಿ ಮಾರಾಟ ಮಾಡಲಾಗುತ್ತಿದ್ದು, ಒಬ್ಬರಿಗೆ ಎರಡು ಕೆಜಿ ನೀಡಲಾಗುತ್ತಿದೆ. ಮದುವೆ ಆಮಂತ್ರಣ ಪತ್ರಿಕೆ ತೋರಿಸಿದವರಿಗೆ ಮಾತ್ರ 25 ಕೆಜಿ ಈರುಳ್ಳಿ ವಿತರಿಸಲಾಗುತ್ತಿದೆ.