ಮುಂಬೈ: ಮುಂಬೈ-ಅಹಮದಾಬಾದ್ ಬುಲೆಟ್ ಟ್ರೇನ್ ಪ್ರಾಜೆಕ್ಟ್ ಸೇರಿ ವಿವಿಧ ಪ್ರಾಜೆಕ್ಟ್ಗಳ ಮರುಪರಿಶೀಲನೆ ನಡೆಸುವಂತೆ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅಧಿಕಾರಿಗಳಿಗೆ ಆದೇಶಿಸಿದ್ದಾರೆ.ಕೃಷಿಕರಿಂದ, ಬುಡಕಟ್ಟು ಜನರಿಂದ ತೀವ್ರ ವಿರೋಧದ ಹಿನ್ನೆಲೆಯಲ್ಲಿ ಬುಲೆಟ್ ಟ್ರೇನ್ ಪ್ರಾಜೆಕ್ಟ್ಗೆ ಸಂಬಂಧಿಸಿದ ಭೂಮಿ ವಶಪಡಿಸಿಕೊಳ್ಳುವ ಕೆಲಸಕ್ಕೆ ಹಿನ್ನಡೆಯಾಗಿದ್ದು, ಇದೇ ವೇಳೆ ಸರ್ಕಾರದ ಆದೇಶ ಇನ್ನಷ್ಟು ತೊಡಕಾಗುವ ಸಾಧ್ಯತೆಯಿದೆ.
ಠಾಕ್ರೆ ನೇತೃತ್ವದ ಮಹಾ ವಿಕಾಸ್ ಅಘಾಡಿ ಸರ್ಕಾರ ಬಹುಮತ ಸಾಬೀತುಪಡಿಸಿದ ಎರಡೇ ದಿನದಲ್ಲಿ ಸರ್ಕಾರದ ಈ ಆದೇಶ ಹೊರಬಿದ್ದಿದೆ.
ಬುಲೆಟ್ ಟ್ರೈನ್ ಸೇರಿ ಹಲವು ಯೋಜನೆಗಳ ಮರುಪರಿಶೀಲನೆಗೆ ಠಾಕ್ರೆ ಆದೇಶ
Follow Us