ಶ್ರೀನಗರ: ಇಬ್ಬರು ಭಯೋತ್ಪಾದಕರೊಂದಿಗೆ ಪ್ರಯಾಣಿಸುತ್ತಿದ್ದ ಜಮ್ಮು ಮತ್ತು ಕಾಶ್ಮೀರ ಪೊಲೀಸ್ ಅಧಿಕಾರಿಯನ್ನೂ ‘ಭಯೋತ್ಪಾದಕ’ ಎಂದೇ ಪರಿಗಣಿಸಲಾಗುವುದು ಎಂದು ಕಾನೂನು ಜಾರಿ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಹಿಜ್ಬುಲ್ ಮುಜಾಹಿದ್ದೀನ್ ಭಯೋತ್ಪಾದಕ ನವೀದ್ ಬಾಬು ಜತೆ ಪ್ರಯಾಣಿಸುವಾಗ ಕುಲ್ಗಂ ಜಿಲ್ಲೆಯ ವಾನ್ಪೋದಲ್ಲಿ ಉಪ ಪೊಲೀಸ್ ವರಿಷ್ಠಾಧಿಕಾರಿ ದವೀಂದರ್ ಸಿಂಗ್ ಅವರನ್ನು ಶನಿವಾರ ವಶಕ್ಕೆ ಪಡೆಯಲಾಗಿತ್ತು. ಸಿಂಗ್, ಶ್ರೀನಗರ ಅಂತಾರಾಷ್ಟ್ರೀಯ ವಿಮಾನನಿಲ್ದಾಣದಲ್ಲಿ ಕಾರ್ಯನಿರ್ವಹಿಸುತ್ತಿದ್ದರು.
ರಾಷ್ಟ್ರಪತಿ ಪದಕ ಪುರಸ್ಕೃತ ಅಧಿಕಾರಿ ದವೀಂದರ್ ಸಿಂಗ್ ಶಸ್ತ್ರಸಜ್ಜಿತ ಭಯೋತ್ಪಾದಕರೊಂದಿಗೆ ಏಕೆ ಪ್ರಯಾಣಿಸುತ್ತಿದ್ದರು ಎಂಬ ಪ್ರಶ್ನೆ ಪೊಲೀಸ್ ವಲಯದಲ್ಲಿ ಕಾಡುತ್ತಿದೆ.
‘ಭಯೋತ್ಪಾದಕರ ಜತೆಗಿದ್ದ ಡಿವೈಎಸ್ಪಿಯೂ ಉಗ್ರನೇ’
Follow Us