ಕೊಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ಬಂದ್ ಬಿಸಿ ತೀವ್ರವಾಗಿದೆ. ಸಿಲಿಗುರಿಯಲ್ಲಿ ಕೂಡ ಬಂದ್ ಬೆಂಬಲಿಸಿ ಹಲವು ಸಂಘಟನೆಗಳು ಬೀದಿಗಿಳಿದಿವೆ, ಇಲ್ಲಿನ ಬಸ್ ಚಾಲಕರು ಹೆಲ್ಮೆಟ್ ಧರಿಸಿ ವಾಹನ ಚಲಾಯಿಸುತ್ತಿದ್ದಾರೆ. ಕಲ್ಲು ತೂರಿದರೆ ಮುಂಜಾಗ್ರತಾ ಕ್ರಮವಾಗಿ ಹೆಲ್ಮೆಟ್ ಧರಿಸಲಾಗಿದೆ. ಈ ಮಧ್ಯೆ ಕೊಲ್ಕತ್ತಾ ಸೇರಿದಂತೆ ಪ್ರಮುಖ ನಗರಗಳಲ್ಲಿ ಭದ್ರತಾ ವ್ಯವಸ್ಥೆ ಬಿಗಿಗೊಳಿಸಲಾಗಿದೆ.