ನವದೆಹಲಿ: ಭಾರತ ಮತ್ತು ಪಾಕಿಸ್ತಾನ ಬುಧವಾರ ರಾಜತಾಂತ್ರಿಕ ಮಾರ್ಗಗಳ ಮೂಲಕ ನವದೆಹಲಿ ಮತ್ತು ಇಸ್ಲಾಮಾಬಾದ್ನಲ್ಲಿ ಏಕಕಾಲದಲ್ಲಿ ತಮ್ಮ ವಶದಲ್ಲಿರುವ ನಾಗರಿಕ ಕೈದಿಗಳು ಮತ್ತು ಮೀನುಗಾರರ ಪಟ್ಟಿಯನ್ನು ಪರಸ್ಪರ ವಿನಿಮಯ ಮಾಡಿಕೊಂಡವು.
ಭಾರತದ ವಶದಲ್ಲಿರುವ 267 ಪಾಕಿಸ್ತಾನ ನಾಗರಿಕ ಕೈದಿಗಳು ಮತ್ತು 99 ಮೀನುಗಾರರ ಪಟ್ಟಿಗಳನ್ನು ಪಾಕಿಸ್ತಾನಕ್ಕೆ ಭಾರತ ಹಸ್ತಾಂತರಿಸಿತು. ಅದೇ ರೀತಿ, ಪಾಕಿಸ್ತಾನವು ತನ್ನ ವಶದಲ್ಲಿರುವ ಭಾರತೀಯರು ಎನ್ನಲಾದ 55 ನಾಗರಿಕ ಕೈದಿಗಳು ಮತ್ತು 227 ಮೀನುಗಾರರ ಪಟ್ಟಿಗಳನ್ನು ಭಾರತದೊಂದಿಗೆ ಹಂಚಿಕೊಂಡಿತು.
2008 ರ ಒಪ್ಪಂದದ ನಿಬಂಧನೆಗಳಿಗೆ ಅನುಗುಣವಾಗಿ, ಪ್ರತಿ ವರ್ಷ ಜನವರಿ 1 ಮತ್ತು ಜುಲೈ 1 ರಂದು ಅಂತಹ ಪಟ್ಟಿಗಳನ್ನು ವಿನಿಮಯ ಮಾಡಿಕೊಳ್ಳಲಾಗುತ್ತದೆ.
ಭಾರತ-ಪಾಕಿಸ್ತಾನದಿಂದ ಕೈದಿಗಳ ಪಟ್ಟಿ ವಿನಿಮಯ
Follow Us