ಶಬರಿಮಲೆ : 41 ದಿನಗಳ ಕಾಲ ನಡೆದ ಶಬರಿಮಲೆ ಮಂಡಲ ಪೂಜೆ ಅವಧಿ ಕೊನೆಗೊಂಡಿದೆ. ಶುಕ್ರವಾರ ಮಂಡಲ ಪೂಜೆಯ ಬಳಿಕ ರಾತ್ರಿ ದೇವಸ್ಥಾನದ ಬಾಗಿಲನ್ನು ಮುಚ್ಚಲಾಯಿತು. ಇನ್ನು ಮಕರ ವಿಳಕ್ಕ್ ಮಹೋತ್ಸವಕ್ಕಾಗಿ ಡಿಸೆಂಬರ್ 30ರಂದು ಸಂಜೆ 5 ಗಂಟೆಗೆ ದೇವಸ್ಥಾನದ ಬಾಗಿಲನ್ನು ತೆರೆಯಲಾಗುವುದು. ಮಕರ ಜ್ಯೋತಿ ದರ್ಶನದೊಂದಿಗೆ ಈ ವರ್ಷದ ಪೂಜಾ ಕೈಂಕರ್ಯ ಕೊನೆಗೊಳ್ಳಲಿದೆ.