Monday, January 18, 2021

ಮಗನ ನಕಲಿ ಮರಣಪತ್ರ ಸೃಷ್ಟಿ- ತಂದೆ ಬಂಧನ

ಕೋಲ್ಕತ್ತ: ಮಗ ಸತ್ತಿದ್ದಾನೆ. ಆತನ ಜೀವ ವಿಮೆ ಹಣ ನನಗೆ ನೀಡಿ. ಹೀಗೆ ಮಾಸ್ಟರ್  ಪ್ಲಾನ್ ಸಿದ್ದಪಡಿಸಿ ನಕಲಿ ಡೆತ್ ಸರ್ಟಿಪಿಕೇಟ್ ಸಿದ್ದಪಡಿಸಿದ್ದ ತಂದೆಯನ್ನು ಪೊಲೀಸರು ಬಂಧಿಸಿದ್ದಾರೆ. ಪಶ್ಛಿಮ ಬಂಗಾಳದ  ಜಲಪಾಯ್ ಗುರಿಯಲ್ಲಿ ಈ ಘಟನೆ ನಡೆದಿದೆ. ಪುತ್ರ ಅಮರೇಶ್ ಕೇರಳದಲ್ಲಿ ಕೆಲಸ ಮಾಡುತ್ತಿದ್ದ. ಪಶ್ಚಿಮ ಬಂಗಾಳದಿಂದ ದೂರದಲ್ಲಿರುವ ಕಾರಣ ತನ್ನ  ಪ್ಲಾನ್ ಯಶಸ್ವಿಯಾಗಬಹುದು ಎಂದು ತಂದೆ ಕೃಷ್ಣಕಾಂತ್ ಸರ್ಕಾರ್ ಭಾವಿಸಿದ್ದ . ಅಗತ್ಯ ದಾಖಲೆಗಳನ್ನು ಸಿದ್ದಪಡಿಸಿ ಜೀವ ವಿಮಾ ಕಚೇರಿಗೆ ಕೂಡ ನೀಡಿದ್ದ. ಆದರೆ ಸಹಿಯಲ್ಲಿ ವ್ಯತ್ತಾಸ ಇರುವುದನ್ನು ತಿಳಿದ ಅಧಿಕಾರಿಗಳು ತನಿಖೆ ನಡೆಸಿದಾಗ ಸತ್ಶ ಬೆಳಕಿಗೆ ಬಂದಿದೆ. ಆರೋಪಿ ಕೃಷ್ಣಕಾಂತ್   ವೈದ್ಯನೆಂದೇ ಗುರುತಿಸಿಕೊಂಡಿದ್ದ.

ಮತ್ತಷ್ಟು ಸುದ್ದಿಗಳು

Latest News

ಬೆಂಗಳೂರಿನಲ್ಲಿ 193, ರಾಜ್ಯದಲ್ಲಿ 435 ಮಂದಿಗೆ ಕೊರೋನಾ ಸೋಂಕು, 9 ಜನ ಸಾವು

newsics.com ಬೆಂಗಳೂರು: ರಾಜ್ಯದಲ್ಲಿ ಇಂದು(ಜ.18) 435 ಜನರಿಗೆ ಕೊರೋನಾ ಸೋಂಕು ತಗುಲಿದೆ. ಕಳೆದ 24 ಗಂಟೆಗಳಲ್ಲಿ 973 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ....

ಮರಕ್ಕೆ ಡಿಕ್ಕಿಯಾದ ಕಾರು; ಮಾಜಿ ಶಾಸಕ ಅನಿಲ್ ಲಾಡ್ ಪಾರು

newsics.com ಬೆಂಗಳೂರು: ಮಾಜಿ ಶಾಸಕ ಅನಿಲ್ ಲಾಡ್ ಪ್ರಯಾಣಿಸುತ್ತಿದ್ದ ಕಾರು ಅಪಘಾತಕ್ಕೀಡಾಗಿದ್ದು, ಗಾಯಗೊಂಡಿರುವ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.ಸಂಜಯನಗರ ಮುಖ್ಯ ರಸ್ತೆಯ ಸಿಗ್ನಲ್'ನಲ್ಲಿ ಈ ಘಟನೆ ನಡೆದಿದೆ. ಗೆಳೆಯನ ಮನೆಗೆ ಹೋಗಿ...

ಅಜೀಂ ಪ್ರೇಮ್ ಜಿ, ದೇವಿ ಪ್ರಸಾದ್ ಶೆಟ್ಟಿ, ಸುದೀಪ್’ಗೆ ಪ್ರೆಸ್ ಕ್ಲಬ್ ಪ್ರಶಸ್ತಿ

newsics.com ಬೆಂಗಳೂರು: 2020ನೇ ಸಾಲಿನ ಬೆಂಗಳೂರು ಪ್ರೆಸ್ ಕ್ಲಬ್ ಪ್ರಶಸ್ತಿ ಬಿಡುಗಡೆ ಮಾಡಿದೆ. ಈ ಬಾರಿ ವರ್ಷದ ವ್ಯಕ್ತಿ ಪ್ರಶಸ್ತಿಗೆ ವಿಪ್ರೋ ಸಂಸ್ಥೆಯ ಅಧ್ಯಕ್ಷ ಅಜೀಂ ಪ್ರೇಮ್ ಜಿ ಭಾಜನರಾಗಿದ್ದಾರೆ. ಪ್ರೆಸ್ ಕ್ಲಬ್ ವಿಶೇಷ ಪ್ರಶಸ್ತಿಯನ್ನು ಕೊರೋನಾ...
- Advertisement -
error: Content is protected !!