ನವದೆಹಲಿ: ಸಿಎಎಗೆ ಸಂಬಂಧಿಸಿದಂತೆ ಇನ್ ಸ್ಟಾಗ್ರಾಮ್ ನಲ್ಲಿ
ಅಭಿಪ್ರಾಯ ಹಂಚಿಕೊಂಡು ಟ್ರೋಲ್ ಗೆ ಒಳಗಾಗಿರುವ ಮಗಳನ್ನು ಸಮರ್ಥಿಸಿಕೊಂಡಿರುವ
ಭಾರತದ ಮಾಜಿ ಕ್ರಿಕೆಟಿಗ ಮತ್ತು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ, ತಮ್ಮ
ಮಗಳನ್ನು ರಾಜಕೀಯದಿಂದ ದೂರವಿಡಿ ಎಂದು ಮನವಿ ಮಾಡಿದ್ದಾರೆ.
“ದಯವಿಟ್ಟು ಸನಾಳನ್ನು ಈ ವಿಷಯಗಳಿಂದ ದೂರವಿರಿ. ಆ ಪೋಸ್ಟ್ ನಿಜವಲ್ಲ..ರಾಜಕೀಯದ
ಕುರಿತು ಏನನ್ನಾದರೂ ಅರಿಯಲು ಆಕೆಯಿನ್ನೂ ತುಂಬಾ ಸಣ್ಣವಳು” ಎಂದು
ಅವರು ಟ್ವೀಟ್ ಮಾಡಿದ್ದಾರೆ.
ಸನಾ ತನ್ನ ಇನ್ ಸ್ಟಾಗ್ರಾಮ್ ಖಾತೆಯಲ್ಲಿ ಕುಷವಂತ್ ಸಿಂಗ್ ಅವರ ‘ ದಿ ಎಂಡ್ ಆಫ್ ಇಂಡಿಯಾ’ ಪುಸ್ತಕದ ಫ್ಯಾಸ್ಟಿಸ್ಟ್
ಆಡಳಿತಕ್ಕೆ ಸಂಬಂಧಿಸಿದ ಕೆಲ ಸಾಲುಗಳನ್ನು ಹಂಚಿಕೊಂಡಿದ್ದರು. ಇದಕ್ಕೆ
ತೀವ್ರ ವಿರೋಧ ವ್ಯಕ್ತವಾಗಿತ್ತು.
ಮಗಳನ್ನು ರಾಜಕೀಯದಿಂದ ದೂರವಿಡಿ; ಸೌರವ್ ಗಂಗೂಲಿ
Follow Us