ಚಂಡೀಗಢ: ಪಂಜಾಬ್ ನ ಮೊಹಾಲಿ ಜಿಲ್ಲೆಯ ಖರಾರ್ ಪಟ್ಟಣದಲ್ಲಿ ತನ್ನ ಮಗಳ ಮುಂದೆಯೇ ಶಿಕ್ಷಕಿಯನ್ನು ಶಾಲೆಯ ಹೊರಗಡೆ ಗುಂಡಿಕ್ಕಿ ಹತ್ಯೆ ಮಾಡಿರುವ ಘಟನೆ ಗುರುವಾರ ನಡೆದಿದೆ.
ಸರಬಜಿತ್ ಕೌರ್ ಎಂಬ ಶಿಕ್ಷಕಿ ತನ್ನ ಐದು ವರ್ಷದ ಮಗಳೊಂದಿಗೆ ಸ್ಕೂಟರ್ ನಲ್ಲಿ ಶಾಲೆಗೆ ಆಗಮಿಸಿ ಪಾರ್ಕಿಂಗ್ ಮಾಡುತ್ತಿದ್ದ ವೇಳೆ ದುಷ್ಕರ್ಮಿಯೊಬ್ಬ ಗುಂಡಿನ ದಾಳಿ ನಡೆಸಿದ್ದಾನೆ. ದಾಳಿ ನಡೆಸಿದ ವ್ಯಕ್ತಿ ತನ್ನ ಮುಖಕ್ಕೆ ಬಟ್ಟೆ ಕಟ್ಟಿಕೊಂಡಿದ್ದು, ಸ್ಥಳದಿಂದ ಪರಾರಿಯಾಗುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.