ಹೈದರಾಬಾದ್; ಇಲ್ಲಿನ ಶಾಡ್ನಗರದ ಮನೆಯೊಂದರ ತಾರಸಿಯಲ್ಲಿ ಚಿರತೆಯೊಂದು ಮಲಗಿ ಸೊಂಪಾಗಿ ನಿದ್ರಿಸುತ್ತಿರುವುದು ಪತ್ತೆಯಾಗಿದ್ದು, ಜನರಲ್ಲಿ ಆತಂಕ ಮೂಡಿಸಿತ್ತು.
ತಕ್ಷಣ ಎಚ್ಚೆತ್ತುಕೊಂಡ ಜನರು ಸದ್ದು ಮಾಡಿ ಚಿರತೆಯನ್ನು ಎಬ್ಬಿಸದೆ, ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಅರಣ್ಯ ಇಲಾಖೆ ಸಿಬ್ಬಂದಿಯೊಂದಿಗೆ ಆಗಮಿಸಿ 5ರಿಂದ 6 ವರ್ಷದ ಚಿರತೆಗೆ ಅರವಳಿಕೆ ನೀಡಿ ಸೆರೆಹಿಡಿದು ನೆಹರೂ ಪ್ರಾಣಿಸಂಗ್ರಹಾಲಯದಲ್ಲಿ ಬಿಟ್ಟಿದ್ದಾರೆ. ಪ್ರಜ್ಞೆ ತಪ್ಪಿದ್ದ ಚಿರತೆಯನ್ನು ಸ್ಟ್ರೆಚರ್ ನಲ್ಲಿ ಸಾಗಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.