ನವದೆಹಲಿ: ಜನವರಿ 1ರಿಂದ ಭಾರತೀಯ ಸೇನಾ ಮುಖ್ಯಸ್ಥರಾಗಿ ಲೆಫ್ಟಿನೆಂಟ್ ಜನರಲ್ ಮನೋಜ್ ಮುಕುಂದ್ ನರ್ವಾಣೆ ಅಧಿಕಾರ ವಹಿಸಿಕೊಳ್ಳಲಿದ್ದಾರೆ.ಈಗಿನ ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಡಿಸೆಂಬರ್ 31ರಂದು ನಿವೃತ್ತರಾಗಲಿದ್ದಾರೆ. ಹೀಗಾಗಿ, 13 ಲಕ್ಷ ಬಲಿಷ್ಠ ಭಾರತಿಯ ಸೇನಾ ಪಡೆಯ ಮುಂದಾಳತ್ವವನ್ನು ನರ್ವಾಣೆ ವಹಿಸಿಕೊಳ್ಳಲಿದ್ದಾರೆ.ಸದ್ಯ ನರ್ವಾಣೆ ಅವರು ಸೇನೆಯ ಉಪ ಮುಖ್ಯಸ್ಥರಾಗಿದ್ದು, ಭಾರತ- ಚೀನಾ ಗಡಿಯ 4 ಸಾವಿರ ಕಿ.ಮೀ. ರಕ್ಷಣೆ ಹೊಣೆ ಹೊತ್ತಿದ್ದರು.ದೇಶದ ಈಶಾನ್ಯ ಪ್ರದೇಶ, ಜಮ್ಮು ಕಾಶ್ಮೀರ ಸೇರಿ ಹಲವೆಡೆ ಸತತ 37 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ.ಶ್ರೀಲಂಕಾದಲ್ಲಿ ಭಾರತೀಯ ಶಾಂತಿ ಪಾಲನಾ ಪಡೆಯ ಮುಖ್ಯಸ್ಥರಾಗಿದ್ದ ನರ್ವಾಣೆ, ಮೂರು ವರ್ಷ ಮ್ಯಾನ್ಮಾರ್ನ ಭಾರತೀಯ ರಾಯಭಾರ ಕಚೇರಿಯಲ್ಲಿ ಸೇವೆ ಸಲ್ಲಿಸಿದ್ದಾರೆ.1980ರಲ್ಲಿ ಸಿಖ್ ಲೈಟ್ ಇನ್ಫೆಂಟ್ರಿ ರೆಜಿಮೆಂಟ್ನಲ್ಲಿ ಸೇವೆಗೆ ಸೇರಿದ್ದರು.