ಮುಂಬೈ: ಕರ್ನಾಟಕದ ಮಾದರಿಯಲ್ಲೇ ಮಹಾರಾಷ್ಟ್ರದಲ್ಲಿ ಒಂದಕ್ಕಿಂತ ಹೆಚ್ಚು ಉಪಮುಖ್ಯಮಂತ್ರಿಗಳ ಸ್ಥಾನಗಳನ್ನು ಸೃಜಿಸಲಿದ್ದಾರೆ ಎಂಬ ವದಂತಿಗಳಿಗೆ ತೆರೆಬಿದ್ದಿದ್ದು, ಅಲ್ಲಿನ ಸರ್ಕಾರ ಕೇವಲ ಒಂದು ಡಿಸಿಎಂ ಹುದ್ದೆಗೆ ಅವಕಾಶ ನೀಡಿದೆ.
ಆ ಹುದ್ದೆ ಎನ್‌ಸಿಪಿ ಪಾಲಾಗಿದೆ. ಹೊಸ ಸರ್ಕಾರದಲ್ಲಿ ಎನ್‌ಸಿಪಿಗೆ ಅತೀ ಹೆಚ್ಚಿನ 16 ಸಚಿವ ಸಚಿವ ಸ್ಥಾನಗಳು ಸಿಗಲಿವೆ. ಶಿವಸೇನೆಗೆ ಮುಖ್ಯಮಂತ್ರಿ ಸ್ಥಾನದ ಜೊತೆಗೆ 15 ಸ್ಥಾನಗಳು ಸಿಕ್ಕಿವೆ.
ಕಾಂಗ್ರೆಸ್ ಸ್ಪೀಕರ್ ಸ್ಥಾನದ ಜೊತೆ 12 ಸಚಿವ ಸ್ಥಾನಗಳು ದೊರೆತಿವೆ.