ಹೈದರಾಬಾದ್: ಮಹಿಳಾ ಕಂಡಕ್ಟರ್ ಗಳ ಸುರಕ್ಷತೆ ಖಾತರಿಪಡಿಸಲು ತೆಲಂಗಾಣ ಮುಖ್ಯಮಂತ್ರಿ ಚಂದ್ರಶೇಖರ್ ರಾವ್ ಹಲವು ಕ್ರಮಗಳನ್ನು ಘೋಷಿಸಿದ್ದಾರೆ. ರಾತ್ರಿ ಎಂಟು ಗಂಟೆಗೆ ಅವರ ಡ್ಯೂಟಿ ಮುಗಿಯಬೇಕು. ಮುಂದೆ ಹೆಚ್ಚಿನ ಅವಧಿ ಕೆಲಸ ಮಾಡುವಂತಿಲ್ಲ. ಎಂಟು ಗಂಟೆಗೆ ಲೆಕ್ಕ ಒಪ್ಪಿಸಿ ಮನೆಗೆ ತೆರಳಬೇಕು ಎಂದು ಆದೇಶ ನೀಡಿದ್ದಾರೆ. ಬಸ್ಸಿನಲ್ಲಿ ಟಿಕೇಟ್ ಪಡೆಯುವುದು ಪ್ರಯಾಣಿಕರ ಕರ್ತವ್ಯ. ಇದನ್ನು ಅವರು ಕಂಡಕ್ಟರ್ ಬಳಿ ಕೇಳಿ ಪಡೆದುಕೊಳ್ಳಬೇಕು. ಪ್ರಯಾಣಿಕ ಟಿಕೇಟ್ ಪಡೆಯದಿದ್ದರೆ ಕಂಡಕ್ಟರ್ ನ್ನು ಅದಕ್ಕೆ ಹೊಣೆ ಮಾಡುವುದಿಲ್ಲ ಎಂದು ಮುಖ್ಯಮಂತ್ರಿ ಚಂದ್ರಶೇಖರ್ ರಾವ್ ಹೇಳಿದ್ದಾರೆ.