ತಿರುವನಂತಪುರ: ಮಹಿಳೆಯರು ಹೊರಗಡೆ ತೆರಳುವಾಗ ಇರುವ ನಿರ್ಬಂಧ ವಿರೋಧಿಸಿ ರಾತ್ರಿ ನಡಿಗೆ ಕಾರ್ಯಕ್ರಮಕ್ಕೆ ಕೇರಳ ಸರ್ಕಾರ ಚಿಂತನೆ ನಡೆಸಿದೆ. ಇದೀಗ ಎಲ್ಲ ಸಮಯದಲ್ಲಿ ಮಹಿಳೆಯರು ಮನೆಯಿಂದ ಹೊರಗಡೆ ಹೋಗುವಂತಿಲ್ಲ. ಇದರ ವಿರುದ್ದವಾಗಿ ಈ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಸಚಿವೆ ಕೆ ಕೆ ಶೈಲಜಾ ಹೇಳಿದ್ದಾರೆ. ಡಿಸೆಂಬರ್ 29 ರಂದು ರಾಜ್ಯದ 100 ಕಡೆ ಮಹಿಳೆಯರ ರಾತ್ರಿ ನಡಿಗೆ ಕಾರ್ಯಕ್ರಮ ನಡೆಯಲಿದೆ ಎಂದು ಅವರು ತಿಳಿಸಿದ್ದಾರೆ