Tuesday, December 6, 2022

ಮಹಿಳೆಯರ ಸುರಕ್ಷತೆ- ರಾಜ್ಯಗಳಿಗೆ ಕೇಂದ್ರ ಗೃಹ ಕಾರ್ಯದರ್ಶಿ ಪತ್ರ

Follow Us

ನವದೆಹಲಿ: ಮಹಿಳೆಯರ ಸುರಕ್ಷತೆ ಖಾತರಿಪಡಿಸಲು ಅಗತ್ಯ ಇರುವ ಎಲ್ಲ ಕ್ರಮ ತೆಗೆದುಕೊಳ್ಳುವಂತೆ ಕೇಂದ್ರ ಗೃಹ ಕಾರ್ಯದರ್ಶಿ ಅಜಯ್ ಕುಮಾರ್ ಭಲ್ಲಾ ಸೂಚಿಸಿದ್ದಾರೆ. ಈ ಸಂಬಂಧ ಅವರು ಎಲ್ಲ ರಾಜ್ಯ ಸರ್ಕಾರಗಳಿಗೆ ಪತ್ರ ಬರೆದಿದ್ದಾರೆ. ಮುಖ್ಯವಾಗಿ ಪೊಲೀಸ್ ಇಲಾಖೆಯ ಲೋಪಗಳನ್ನು ಸರಿಪಡಿಸಬೇಕು. ವೈಜ್ಞಾನಿಕ ಮಾದರಿಯ ತನಿಖಾ ವಿಧಾನಗಳನ್ನು ಅಳವಡಿಸಿಕೊಳ್ಳಬೇಕು.  ಇದಕ್ಕೆ ಸಂಬಂಧಿಸಿದ ತರಬೇತಿಯನ್ನು ಹೊಂದಿರಬೇಕು ಎಂದು ಭಲ್ಲಾ ನಿರ್ದೇಶನ ನೀಡಿದ್ದಾರೆ. ತನಿಖೆಯ ಸಂದರ್ಭದಲ್ಲಿ ವಿಧಿ ವಿಜ್ಞಾನ ಪ್ರಯೋಗಾಲದ ಸಾಕ್ಷ್ಯಗಳು ನಿರ್ಣಾಯಕ ಪಾತ್ರ ವಹಿಸುತ್ತವೆ. ಇದನ್ನು ಗಮನದಲ್ಲಿಟ್ಟುಕೊಂಡು ಅಗತ್ಯ ಸಿದ್ದತೆ ಮತ್ತು ತರಬೇತಿ ಅತ್ಯಗತ್ಯ ಎಂದು ಗೃಹ ಕಾರ್ಯದರ್ಶಿ ಸೂಚಿಸಿದ್ದಾರೆ.

ಮತ್ತಷ್ಟು ಸುದ್ದಿಗಳು

vertical

Latest News

20ಕ್ಕೂ ಹೆಚ್ಚು ಬಾರಿ ಕಲ್ಲು ಎತ್ತಿಹಾಕಿ ವ್ಯಕ್ತಿಯ ಹತ್ಯೆ

newsics.com ಬೆಂಗಳೂರು: ರಾಜಧಾನಿ ಬೆಂಗಳೂರಿನ ಕೆ. ಪಿ. ಅಗ್ರಹಾರದಲ್ಲಿ ಹತ್ಯೆಗೀಡಾದ ಯುವಕನ ಗುರುತು ಪತ್ತೆ ಹಚ್ಚಲಾಗಿದೆ. ಮೃತಪಟ್ಟ ವ್ಯಕ್ತಿಯನ್ನು  ಬಾಳಪ್ಪ ಜಮಖಂಡಿ ಎಂದು ಗುರುತಿಸಲಾಗಿದೆ. ಕಲ್ಲು ಎತ್ತಿ...

ಬಂಗಾಳ ಕೊಲ್ಲಿಯಲ್ಲಿ ವಾಯು ಭಾರ ಕುಸಿತ: ರಾಜ್ಯದಲ್ಲಿ ನಾಲ್ಕು ದಿನ ಮಳೆ

newsics.com ಬೆಂಗಳೂರು: ಬಂಗಾಳ ಕೊಲ್ಲಿಯಲ್ಲಿ ವಾಯು ಭಾರ ಕುಸಿತ ಸಂಭವಿಸಿದ್ದು ಚಂಡ ಮಾರುತ ರೂಪುಗೊಳ್ಳುತ್ತಿದೆ. ಇದರ ಪರಿಣಾಮ ರಾಜ್ಯದಲ್ಲಿ ನಾಳೆಯಿಂದ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ನಾಲ್ಕು ದಿನ ಮಳೆ...

ಬೈಕ್ ಗೆ ಸಾರಿಗೆ ಬಸ್ ಡಿಕ್ಕಿ: ಮೂವರ ಸಾವು, ಓರ್ವನಿಗೆ ಗಾಯ

newsics.com ರಾಯಚೂರು: ರಾಜ್ಯದ ರಾಯಚೂರು ತಾಲೂಕಿನಲ್ಲಿ ಭೀಕರ ಅಪಘಾತ ಸಂಭವಿಸಿದೆ. ಸಾರಿಗೆ ಬಸ್ ಬೈಕ್ ಗೆ ಡಿಕ್ಕಿ ಹೊಡೆದ ಪರಿಣಾಮ ಮೂವರು ಮೃತಪಟ್ಟಿದ್ದು, ಓರ್ವ ಗಂಭೀರವಾಗಿ ಗಾಯಗೊಂಡಿದ್ದಾನೆ. ಮಸ್ಕಿ ಸಮೀಪದ ಗುಡದೂರು ಬಳಿ ಈ ಅಪಘಾತ...
- Advertisement -
error: Content is protected !!