ಮುಂಬೈ: ಮಧ್ಯ ಮುಂಬಯಿಯ ಮಹೀಮ್ ಬೀಚ್‌ನಲ್ಲಿ ಅಪರಿಚಿತ ವ್ಯಕ್ತಿಯ ಕತ್ತರಿಸಿದ ದೇಹದ ಭಾಗಗಳು ತುಂಬಿರುವ ಸೂಟ್‌ಕೇಸ್ ಪತ್ತೆಯಾಗಿದೆ.
ಸೋಮವಾರ ಸಂಜೆ ಮಹೀಮ್ ಬೀಚ್‌ನಲ್ಲಿ ನೀರಿನ ಮೇಲೆ ತೇಲುತ್ತಿರುವ ಕಪ್ಪು ಸೂಟ್‌ಕೇಸ್ ಅನ್ನು ಸಾರ್ವಜನಿಕರು ಗುರುತಿಸಿ ಮಾಹಿತಿ ನೀಡಿದ್ದಾರೆ. ಸೂಟ್‌ಕೇಸ್‌ನೊಳಗಿನ ಪ್ಲಾಸ್ಟಿಕ್ ಚೀಲದಲ್ಲಿ ಭುಜದಿಂದ ಬೇರ್ಪಟ್ಟ ಕೈ, ಕಾಲಿನ ಒಂದು ಭಾಗ ಮತ್ತು ವ್ಯಕ್ತಿಯ ಖಾಸಗಿ ಭಾಗಗಳಿದ್ದು, ಅವುಗಳ ಪರೀಕ್ಷೆಗಾಗಿ ಆಸ್ಪತ್ರೆಗೆ ಕಳುಹಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.