Wednesday, February 24, 2021

ಮಾಜಿ ಪ್ರಧಾನಿ ಕುಟುಂಬಕ್ಕಿಲ್ಲ SPG ಭದ್ರತೆ

ನವದೆಹಲಿ: ಮಾಜಿ ಪ್ರಧಾನಿಗಳ ಕುಟುಂಬ ಸದಸ್ಯರಿಗೆ ಒದಗಿಸಲಾಗುತ್ತಿದ್ದ ಎಸ್ಪಿಜಿ ಭದ್ರತೆಯನ್ನು ಹಿಂಪಡೆಯಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಮುಂದಿನ ವಾರ ಎಸ್ಪಿಜಿ ತಿದ್ದುಪಡಿ ಮಸೂದೆ ಮಂಡನೆಗೆ ಕೇಂದ್ರ ಸರ್ಕಾರ ಮುಂದಾಗುವ ಸಾಧ್ಯತೆ ದಟ್ಟವಾಗಿದೆ. ಪ್ರಸ್ತಾವಿತ ತಿದ್ದುಪಡಿಯಲ್ಲಿ ಮಾಜಿ ಪ್ರಧಾನಿಯ ಕುಟುಂಬ ಸದಸ್ಯರಿಗೆ ಎಸ್​ಪಿಜಿ ಭದ್ರತೆ ತೆಗೆದುಹಾಕಲಾಗಿದೆ. ಎಸ್​ಪಿಜಿ ಮಸೂದೆ ತಿದ್ದುಪಡಿಗೆ ಬುಧವಾರ ಕೇಂದ್ರ ಸಂಪುಟ ಒಪ್ಪಿಗೆ ನೀಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ರಾಹುಲ್ ಗಾಂಧಿ, ಅವರ ತಾಯಿ ಸೋನಿಯಾ ಗಾಂಧಿ ಮತ್ತು ಸಹೋದರಿ ಪ್ರಿಯಾಂಕಾ ಗಾಂಧಿ ಅವರಿಗೆ ನೀಡಲಾಗಿದ್ದ ಎಸ್​ಪಿಜಿ ಭದ್ರತೆಯನ್ನು ಕೇಂದ್ರ ಸರ್ಕಾರ ರದ್ದುಗೊಳಿಸಿದ ಮರುದಿನ ಈ ಬೆಳವಣಿಗೆ ನಡೆದಿದೆ. ಇದೀಗ ಗಾಂಧಿ ಕುಟುಂಬಕ್ಕೆ ಕೇಂದ್ರ ಮೀಸಲು ಪೊಲೀಸ್ ಪಡೆಯಿಂದ ಝಡ್ ಪ್ಲಸ್​ ಭದ್ರತೆ ಮಾತ್ರ ಇದೆ.

ಮತ್ತಷ್ಟು ಸುದ್ದಿಗಳು

Latest News

ಚಿಕ್ಕಮಗಳೂರಲ್ಲೂ ಮಂಗನ ಕಾಯಿಲೆ ಪತ್ತೆ

newsics.com ಚಿಕ್ಕಮಗಳೂರು: ಎನ್. ಆರ್. ಪುರ ತಾಲೂಕಿನ ಸೀತೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೆಮ್ಮನೆಯಲ್ಲಿ ವ್ಯಕ್ತಿಯೊಬ್ಬರಿಗೆ ಮಂಗನ ಕಾಯಿಲೆ ಇರುವುದು ಪತ್ತೆಯಾಗಿದೆ. ತಾಲೂಕು...

ಬೆಂಗಳೂರಿನಲ್ಲಿ 174 ರಾಜ್ಯದಲ್ಲಿ 334 ಮಂದಿಗೆ ಕೊರೋನಾ, 6‌ಮಂದಿ ಸಾವು

newsics.com ಬೆಂಗಳೂರು: ರಾಜ್ಯದಲ್ಲಿ ಇಂದು(ಫೆ.24) ಹೊಸದಾಗಿ 334 ಮಂದಿಗೆ ಕೊರೋನಾ ಸೋಂಕು ತಗುಲಿದೆ. ಇದರೊಂದಿಗೆ ಒಟ್ಟೂ ಸೋಂಕಿತರ ಸಂಖ್ಯೆ 9,49,183ಕ್ಕೆ ಏರಿಕೆಯಾಗಿದೆ. ಕಳೆದ 24 ಗಂಟೆಯಲ್ಲಿ ರಾಜ್ಯದಲ್ಲಿ ಕೊರೋನಾ ಸೋಂಕಿನಿಂದ 6ಮಂದಿ ಮೃತಪಟ್ಟಿದ್ದು, ಸಾವಿನ ಸಂಖ್ಯೆ...

ನಾಟಕದ ವೇಳೆ ಚಾಮುಂಡಿ ಪಾತ್ರಧಾರಿಗೆ ಆವೇಶ: ರಾಕ್ಷಸ ವೇಷಧಾರಿಯ ಹತ್ಯೆಗೆ ಯತ್ನ

newsics.com ಮಂಡ್ಯ:  ನಾಟಕ ಪ್ರದರ್ಶನದ ವೇಳೆ ಚಾಮುಂಡಿ ವೇಷ ಧರಿಸಿದ ಮಹಿಳೆಗೆ ಮೈ ಮೇಲೆ ಆವೇಶ ಬಂದು ಆಕೆ ವಿಚಿತ್ರವಾಗಿ ವರ್ತಿಸಿದ ಘಟನೆ ಮಂಡ್ಯದಲ್ಲಿ ನಡೆದಿದೆ. ಚಾಮುಂಡಿ ನಾಟಕದಲ್ಲಿ ದೇವಿಯ ವೇಷ ಧರಿಸಿದ ಮಹಿಳೆಯ...
- Advertisement -
error: Content is protected !!