ಮುಂಬೈ: ರಾಷ್ಟ್ರದ ಅತೀ ದೊಡ್ಡ ಕಾರು ತಯಾರಿಕಾ ಕಂಪನಿ ಮಾರುತಿ ಸುಜುಕಿ ಇಂಡಿಯಾದ ದೇಶಿ ಕಾರು ಮಾರಾಟ ಈ ವರ್ಷದ ನವೆಂಬರ್ನಲ್ಲಿ ಶೇ. 1.9ರಷ್ಟು ಕುಸಿತ ಕಂಡಿದೆ.
ಕಂಪನಿ ಬಿಡುಗಡೆ ಮಾಡಿರುವ ವರದಿ ಪ್ರಕಾರ, ಕಳೆದ ವರ್ಷ ನವೆಂಬರ್ನಲ್ಲಿ ಕಂಪನಿ 1,53,539 ವಾಹನಗಳನ್ನು ಮಾರಾಟ ಮಾಡಿತ್ತು. ಈ ವರ್ಷದ ನವೆಂಬರ್ನಲ್ಲಿ 1,50,630 ವಾಹನಗಳು ಮಾರಾಟಗೊಂಡಿವೆ.
ಕಂಪನಿ ತಯಾರಿಸುವ ಆಲ್ಟೋ ಹಾಗೂ ವ್ಯಾಗನ್ ಆರ್ ಸಣ್ಣ ಕಾರುಗಳ ಮಾರಾಟ ಕೂಡ ಇಳಿಮುಖವಾಗಿದೆ. ಕಳೆದ ವರ್ಷ 29,954 ಘಟಕಗಳು ಮಾರಾಟವಾಗಿದ್ದರೇ ಈ ವರ್ಷ 26,306 ಘಟಕಗಳು ಮಾರಾಟವಾಗಿವೆ. ಕಳೆದ ವರ್ಷ ಕೂಡ ಶೇ.12.2 ಕುಸಿದಿತ್ತು.