ಮುಂಬೈ: ನೈತಿಕ ಪೊಲೀಸ್ ಗಿರಿ ಮತ್ತೊಮ್ಮೆ ಸದ್ದು ಮಾಡಿದೆ. ಮುಂಬೈ ಸಮೀಪದ ವಿಕಾಟ್ ಗಢ ಕೋಟೆಯಲ್ಲಿ ಈ ಘಟನೆ ಸಂಭವಿಸಿದೆ. ಹೊಸ ವರ್ಷಾಚರಣೆ ಸಂದರ್ಭದಲ್ಲಿ ಕೋಟೆ ಪರಿಸರದಲ್ಲಿ ಮದ್ಯ ಸೇವನೆ ಹಾಗೂ ಇನ್ನಿತರ ಚಟುವಟಿಕೆಯಲ್ಲಿ ತೊಡಗಿದ್ದ 11 ಮಂದಿಗೆ ಥಳಿಸಲಾಗಿದೆ. ಅವರ ಬಟ್ಟೆ ಬಿಚ್ಚಿ ಅರೆ ನಗ್ನ ಸ್ಥಿತಿಯಲ್ಲಿ ಹಿಂಸಿಸಲಾಗಿದೆ ಎಂದು ವರದಿಯಾಗಿದೆ. ಈ ದೌರ್ಜನ್ಯದ ವಿಡೀಯೋ ಜಾಲತಾಣಗಳಲ್ಲಿ ವೈರಲ್ ಆಗಿದೆ. ಚಕ್ರವರ್ತಿ ಶಿವಾಜಿ ಕಟ್ಟಿದ ಕೋಟೆಗೆ ಕಳಂಕ ತಂದ ಆರೋಪ ಹೊರಿಸಿ ಈ ಕೃತ್ಯ ಎಸಗಲಾಗಿದೆ ಎಂದು ಹೇಳಲಾಗಿದೆ. ಶ್ರೀ ಶಿವ ಪ್ರತಿಷ್ಟಾನ ಹಿಂದುಸ್ಥಾನ ಎಂಬ ಸಂಘಟನೆ ಇದರ ಹಿಂದಿದೆ ಎಂದು ವರದಿಯಾಗಿದೆ. ಈ ಸಂಬಂಧ ನೇರಾಳ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.