ನವದೆಹಲಿ: ಇದೇ ಮೊದಲ ಬಾರಿಗೆ ರಚಿಸಲಾಗಿರುವ ಮೂರು ರಕ್ಷಣಾ ಪಡೆ ಮುಖ್ಯಸ್ಛ ಹುದ್ದೆಯನ್ನು ಜನರಲ್ ರಾವತ್ ಇಂದು ಅಲಂಕರಿಸಲಿದ್ದಾರೆ. ಭೂ ಸೇನೆ, ವಾಯು ಪಡೆ ಮತ್ತು ನೌಕಾಪಡೆ ಮಧ್ಯೆ ಕಾರ್ಯಾಚರಣೆ, ಆಧುನೀಕರಣ ಪ್ರಕ್ರಿಯೆಯಲ್ಲಿ ಸಮನ್ವಯ ಸಾಧಿಸಲು ಈ ಹುದ್ದೆ ಸೃಷ್ಟಿಸಲಾಗಿದೆ. 65 ವರ್ಷದ ವಯೋಮಿತಿ ನಿಗದಿಪಡಿಸಲಾಗಿದ್ದು, ರಾವತ್ ಮುಂದೆ ಬೆಟ್ಟದಷ್ಟು ಸವಾಲು ಕೂಡ ಇವೆ.
ಅತ್ಯಂತ ಕಡಿಮೆ ಅವಧಿಯಲ್ಲಿ ಮುಂಚೂಣಿ ನೆಲೆಗಳಿಗೆ ಸೇನೆಯ ರವಾನೆ, ವ್ಯೂಹ ರಚನೆ , ಶತ್ರು ದಾಳಿ ಮಾಡುವ ಮೊದಲೇ ಮರ್ಮಾಘಾತ ನೀಡುವ ಕಾರ್ಯತಂತ್ರದ ಭಾಗವಾಗಿ ಈ ಹುದ್ದೆ ರಚಿಸಲಾಗಿದೆ.