Monday, August 2, 2021

ಮೂರು ರಕ್ಷಣಾ ಪಡೆ ಮುಖ್ಯಸ್ಥರಾಗಿ ರಾವತ್ ಇಂದು ಅಧಿಕಾರ ಸ್ವೀಕಾರ

Follow Us

ನವದೆಹಲಿ: ದೇಶದ ಮಿಲಿಟರಿ ಇತಿಹಾಸದಲ್ಲಿ ಮೊದಲ ಬಾರಿಗೆ ಸೃಷ್ಟಿಯಾಗಿರುವ ಮೂರು ರಕ್ಷಣಾ ಪಡೆ ಮುಖ್ಯಸ್ಥ ಹುದ್ದೆಯನ್ನು ಜನರಲ್ ಬಿಪಿನ್ ರಾವತ್ ಇಂದು ಅಲಂಕರಿಸಲಿದ್ದಾರೆ. ರಾವತ್ ಅವರು ಭೂ ಸೇನೆ, ವಾಯು ಪಡೆ ಮತ್ತು ನೌಕಾಪಡೆಯ ಮುಖ್ಯಸ್ಥರಾಗಲಿದ್ದಾರೆ. ಪ್ರಸಕ್ತ ಇರುವ ಮೂರು ಸೇನಾ ಪಡೆಗಳ ಮುಖ್ಯಸ್ಥರು ಅದೇ ಹುದ್ದೆಯಲ್ಲಿ ಮುಂದುವರಿಯಲಿದ್ದಾರೆ. ಕಾರ್ಯಾಚರಣೆಗೆ ಸಂಬಂಧಿಸಿದಂತೆ ಪೂರ್ಣ ಸ್ವಾತಂತ್ರ್ಯವನ್ನು ಕೂಡ ಈ ಮೂವರು ಸೇನಾ ದಂಡ ನಾಯಕರು ಹೊಂದಿರುತ್ತಾರೆ. ಆದರೆ ನಿರ್ಣಾಯಕ ಸಂದರ್ಭದಲ್ಲಿ ಮೂರು ಸೇನಾ ಪಡೆಗಳಿಗೆ ಸಂಬಂಧಿಸಿದ ಮಹತ್ವದ ನಿರ್ಧಾರ ಕೈಗೊಳ್ಳುವ ಅಧಿಕಾರವನ್ನು ರಾವತ್ ಹೊಂದಿದ್ದಾರೆ. ಪಾಕಿಸ್ತಾನ ತನ್ನ ಸೇನಾ ಪಡೆಯನ್ನು ಆಧುನೀಕರಣಗೊಳಿಸುತ್ತಿರುವ ಹಿನ್ನೆಲೆಯಲ್ಲಿ ಶತ್ರು ದಾಳಿ ಮಾಡುವ ಮೊದಲೇ ಅದರ ಮೇಲೆ ಪ್ರತಿದಾಳಿ ನಡೆಸುವ ಕಾರ್ಯತಂತ್ರದ ಅಂಗವಾಗಿ ಈ ನೂತನ ಹುದ್ದೆ ರಚಿಸಲಾಗಿದೆ.

ಮತ್ತಷ್ಟು ಸುದ್ದಿಗಳು

Latest News

ಇ-ರುಪಿ ಡಿಜಿಟಲ್ ಸೇವೆಗೆ ಪ್ರಧಾನಿ ಮೋದಿ ಚಾಲನೆ

newsics.com ನವದೆಹಲಿ: ಡಿಜಿಟಲ್ ಮೂಲಕ ಹಣ ಪಾವತಿ ಮಾಡುವ ಇ-ರುಪಿ ಸೇವೆಗೆ ಇಂದು ಪ್ರಧಾನಿ ಮೋದಿ ಚಾಲನೆ ನೀಡಿದ್ದಾರೆ. ಇದರಿಂದ ನಗದುರಹಿತ ಹಾಗೂ ಮಧ್ಯವರ್ತಿಗಳ ನೆರವಿಲ್ಲದೆ ಡಿಜಿಟಲ್...

ಪೊಲೀಸ್ ವಶದಲ್ಲಿದ್ದ ಆಫ್ರಿಕನ್ ಪ್ರಜೆ ಸಾವು: ವಿದೇಶಿಗರ ಪ್ರತಿಭಟನೆ, ಲಾಠಿ ಚಾರ್ಜ್

newsics.com ಬೆಂಗಳೂರು: ಡ್ರಗ್ಸ್ ಕೇಸ್ ನಲ್ಲಿ ಪೊಲೀಸರ ವಶದಲ್ಲಿದ್ದ ಆಫ್ರಿಕನ್ ಪ್ರಜೆಯೊಬ್ಬ ಮೃತಪಟ್ಟಿದ್ದಾನೆ. ಈ ಹಿನ್ನೆಲೆಯಲ್ಲಿ ಪೊಲೀಸರೇ ಆತನನ್ನು ಕೊಂದಿದ್ದಾರೆ ಎಂದು ನಗರದ  ಜೆ. ಸಿ ನಗರ ಪೊಲೀಸ್ ಠಾಣೆಮುಂದೆ ಆಫ್ರಿಕನ್ ಪ್ರಜೆಗಳು...

ಕೃಷ್ಣಾ ನದಿ ನೀರು ಹಂಚಿಕೆ ವಿವಾದ: ತಾವು ವಿಚಾರಣೆ ನಡೆಸುವುದಿಲ್ಲವೆಂದ ಸುಪ್ರೀಂ ಕೋರ್ಟ್ ಸಿಜೆಐ

newsics.com ಆಂಧ್ರಪ್ರದೇಶ /ನವದೆಹಲಿ: ಕೃಷ್ಣಾ ನದಿ ನೀರು ಹಂಚಿಕೆ ವಿವಾದಕ್ಕೆ ಸಂಬಂಧಪಟ್ಟು ತಾವು ವಿಚಾರಣೆ ನಡೆಸುವುದಿಲ್ಲವೆಂದು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಎನ್​.ವಿ.ರಮಣ ಹೇಳಿದ್ದಾರೆ. ಆಂಧ್ರಪ್ರದೇಶ ವಿಭಜನೆಯಾದಾಗಿನಿಂದ ತೆಲಂಗಾಣದೊಂದಿಗೆ ಕೃಷ್ಣಾ ನದಿ ನೀರು ಹಂಚಿಕೆ...
- Advertisement -
error: Content is protected !!