Friday, March 5, 2021

ಮೂರು ವರ್ಷಗಳಿಂದ ಫೋನ್ ಬಳಸದ ದಾವೂದ್ ಇಬ್ರಾಹಿಂ

ನವದೆಹಲಿ: ಭೂಗತ ಪಾತಕಿ ದಾವೂದ್ ಇಬ್ರಾಹಿಂ ಕಳೆದ ಮೂರು ವರ್ಷಗಳಿಂದ ದೂರವಾಣಿಯಲ್ಲಿ ಯಾರ ಜೊತೆ ಕೂಡ ಮಾತನಾಡಿಲ್ಲ. ಅಚ್ಚರಿ ಆದರೂ ಇದು ಸತ್ಯ. ದೆಹಲಿ ಪೊಲೀಸರ ಹೇಳಿಕೆ ಪ್ರಕಾರ ದಾವೂದ್ ಇಬ್ರಾಹಿಂ ದೂರವಾಣಿ ಮೂಲಕ ಮಾತನಾಡುವುದನ್ನು ಬಿಟ್ಟಿದ್ದಾನೆ. ಫೋನ್ ನಲ್ಲಿ ಮಾತನಾಡಿದರೇ ಅದನ್ನು ಗುಪ್ತಚರ ದಳದ ಅಧಿಕಾರಿಗಳು ಕದ್ದಾಲಿಸುತ್ತಾರೆ. ಅಲ್ಲದೇ ತನ್ನ ಅಡಗುತಾಣ ಪತ್ತೆಯಾಗಲಿದೆ ಎಂಬ ಭಯವೇ ಇದಕ್ಕೆ ಕಾರಣ ಎಂದು ಹೇಳಲಾಗುತ್ತಿದೆ. 2016ರಲ್ಲಿ ದೆಹಲಿ ಪೊಲೀಸರು ದಾವೂದ್ ಇಬ್ರಾಹಿಂ ಸಂಭಾಷಣೆಯನ್ನು ರೆಕಾರ್ಡ್ ಮಾಡಿದ್ದರು. ಆದರೇ ಈ ಮಾತುಕತೆಯಲ್ಲಿ ಹೆಚ್ಚಿನ ಮಾಹಿತಿ ಇರಲಿಲ್ಲ. ದಾವೂದ್ ಇಬ್ರಾಹಿಂ ಈಗಲೂ ಪಾಕಿಸ್ತಾನದ ಕರಾಚಿಯಲ್ಲಿ ಅಡಗಿ ಕುಳಿತಿದ್ದಾನೆ. ಇದು ತಮ್ಮ ಬಳಿ ಇರುವ ಖಚಿತ ಮಾಹಿತಿ ಎನ್ನುತ್ತಾರೆ ಪೊಲೀಸ್ ಅಧಿಕಾರಿಗಳು.

ಮತ್ತಷ್ಟು ಸುದ್ದಿಗಳು

Latest News

ನೀವಿನ್ನು ರೈಲಲ್ಲಿ ನಿಮ್ಮಿಷ್ಟದ ಸಂಗೀತ, ಸಿನೆಮಾ  ಸವಿಯಬಹುದು!

newsics.comನವದೆಹಲಿ: ನೀವಿನ್ನು ರೈಲಿನಲ್ಲಿ ಪ್ರಯಾಣಿಸುವಾಗಲೂ ನಿಮಗೆ ಬೇಕಾದ ಸಂಗೀತ ಕೇಳುತ್ತಾ, ಸಿನಿಮಾ, ವಿಡಿಯೋಗಳನ್ನು ನೋಡುತ್ತಾ ಖುಷಿಪಡಬಹುದು.ತನ್ನ ಪ್ರಯಾಣಿಕರಿಗೆ ಇಂತಹದೊಂದು ಹೆಚ್ಚುವರಿ ಸೇವೆ ಒದಗಿಸಲು...

ರಸ್ತೆ ಮಧ್ಯೆ ನಿಂತ ಗಜರಾಜ: ಟ್ರಾಫಿಕ್ ಜಾಮ್, ಜನ ಹೈರಾಣ

newsics.comಹಾಸನ: ಪ್ರತಿಭಟನಾಕಾರರು ರಸ್ತೆ ತಡೆ ನಡೆಸುವುದು, ಟ್ರಾಫಿಕ್ ಜಾಮ್ ಆಗುವುದೆಲ್ಲ  ಸಹಜ.ಆದರೆ, ಈ ರಸ್ತೆಯಲ್ಲಿ ಅರ್ಧಗಂಟೆಗೂ ಹೆಚ್ಚು  ಕಾಲ ಸಂಚಾರ ಅಸ್ತವ್ಯಸ್ತವಾಗಲು ಪ್ರತಿಭಟನಾಕಾರರು ಖಂಡಿತ ಕಾರಣರಲ್ಲ. ಈ ರಸ್ತೆ ತಡೆಗೆ...

ಬೆಂಗಳೂರಲ್ಲಿ 385, ರಾಜ್ಯದಲ್ಲಿ 571 ಮಂದಿಗೆ ಸೋಂಕು, ನಾಲ್ವರ ಸಾವು

newsics.comಬೆಂಗಳೂರು: ರಾಜ್ಯದಲ್ಲಿ ಗುರುವಾರ (ಮಾ.4) ಹೊಸದಾಗಿ 571 ಮಂದಿಗೆ ಕೊರೋನಾ ಸೋಂಕು ತಗುಲಿದೆ. ನಾಲ್ವರು ಮೃತಪಟ್ಟಿದ್ದಾರೆ.ಇಂದು 496 ಮಂದಿ ಗುಣಮುಖರಾಗಿದ್ದು, 6,128 ಸಕ್ರಿಯ ಪ್ರಕರಣಗಳಿವೆ. ಈವರೆಗೆ ಒಟ್ಟು 9,34,639 ಮಂದಿ...
- Advertisement -
error: Content is protected !!