ರಾಂಚಿ: ಮೇವು ಹಗರಣದ 3.13 ಕೋಟಿ ರೂ. ಡುಮ್ಕ ಖಜಾನೆ ಪ್ರಕರಣಕ್ಕೆ ಸಂಬಂಧಿಸಿ ಜೈಲಿನಲ್ಲಿರುವ ಬಿಹಾರ ಮಾಜಿ ಮುಖ್ಯಮಂತ್ರಿ ಹಾಗೂ ಆರ್‍ಜೆಡಿ ವರಿಷ್ಠ ಲಾಲು ಪ್ರಸಾದ್ ಯಾದವ್ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಜಾರ್ಖಂಡ್ ಹೈಕೋರ್ಟ್ ತಿರಸ್ಕರಿಸಿದೆ.
ಈ ಪ್ರಕರಣದಲ್ಲಿ ಲಾಲು ಯಾದವ್ ಅವರು ಶಿಕ್ಷೆಯ ಒಟ್ಟು ಅವಧಿಯಲ್ಲಿ ಅರ್ಧವನ್ನೂ ಪೂರೈಸಿಲ್ಲ. ಈ ಹಿನ್ನೆಲೆಯಲ್ಲಿ ಅವರಿಗೆ ಜಾಮೀನು ನೀಡುವುದು ಸೂಕ್ತವಲ್ಲ ಎಂದು ನ್ಯಾಯಾಧೀಶ ಸಿಂಗ್ ಹೇಳಿದ್ದಾರೆ.
ಕಳೆದ 14 ತಿಂಗಳಲ್ಲಿ ಹೈಕೋರ್ಟ್ ಮೂರನೇ ಬಾರಿ ಲಾಲು ಪ್ರಸಾದ್ ಯಾದವ್ ಅವರ ಜಾಮೀನು ನಿರಾಕರಿಸಿದೆ.
ಮೇವು ಪ್ರಕರಣ: ಲಾಲು ಯಾದವ್ ಜಾಮೀನು ನಿರಾಕರಣೆ
Follow Us