ನವದೆಹಲಿ: ಐಆರ್ ಸಿಟಿಸಿ ಮೂಲಕ ಆನ್ ಲೈನ್ ನಲ್ಲಿ ಟಿಕೆಟ್ ಬುಕ್ ಮಾಡುವ ರೈಲು ಪ್ರಯಾಣಿಕರು ಇನ್ಮುಂದೆ ಕಾಯ್ದಿರಿಸಿದ ಪಟ್ಟಿಯ ವಿವರವನ್ನು ಮೊಬೈಲ್ ಅಥವಾ ವೆಬ್ ನಲ್ಲೇ ಪಡೆಯಬಹುದು.
ಇದು ಐಆರ್ಸಿಟಿಸಿ ಮೂಲಕ ಟಿಕೆಟ್ ಬುಕ್ ಮಾಡುವ ಪ್ರಯಾಣಿಕರಿಗೆ ಮಾತ್ರ ಈ ಮಾಹಿತಿ ಲಭ್ಯವಾಗಲಿದೆ..
ಈ ಬಗ್ಗೆ ರೈಲ್ವೇ ಸಚಿವ ಪಿಯೂಷ್ ಗೋಯಲ್ ಟ್ವೀಟ್ ಮಾಡಿ, ಪ್ರಯಾಣಿಕರು ಖಾಲಿ ಇರುವ, ಬುಕ್ ಆಗಿರುವ ಸೀಟುಗಳ ಮಾಹಿತಿ ಇರುವ ಚಾರ್ಟ್ನ್ನು ರೈಲು ಹೊರಡುವ ಅರ್ಧ ಗಂಟೆ ಮೊದಲೇ ನೋಡಬಹುದು ಎಂದಿದ್ದಾರೆ.
ಐಆರ್ಸಿಟಿಸಿಗೆ ಲಾಗಿನ್ ಆಗಿ. ಚಾರ್ಟ್/ವೆಕೆನ್ಸಿ ಎಂಬ ಬಟನ್ ಒತ್ತಿದರೆ ಇನ್ನೊಂದು ಪುಟ ತೆರೆದು ಮುಂದೇನು ಮಾಡಬೇಕೆಂಬುದನ್ನು ನಿರ್ದೇಶಿಸುತ್ತದೆ.
ಮೊಬೈಲ್ ನಲ್ಲೇ ರೈಲ್ವೇ ರಿಸರ್ವೇಷನ್ ಚಾರ್ಟ್
Follow Us