ಗುವಾಹಟಿ: ಪೌರತ್ವ ತಿದ್ದುಪಡಿ ಕಾಯ್ದೆಯ ವಿರೋಧದ ನಡುವೆಯೇ ಪ್ರಧಾನಿ ನರೇಂದ್ರ ಮೋದಿ ಅವರಿಗೆ ‘ಖೇಲೋ ಇಂಡಿಯಾ ಯೋಜನೆ ’ ದುಬಾರಿಯಾಗವ ಸಾಧ್ಯತೆಯಿದೆ.
2020ರ ಜನವರಿ 10ರಿಂದ ಗುವಾಹಟಿಯಲ್ಲಿ ನಡೆಯಲಿರುವ ಖೇಲೋ ಇಂಡಿಯಾ ಪಂದ್ಯಾವಳಿಯ ಉದ್ಘಾಟನೆಗೆ ಪ್ರಧಾನಿ ಮೋದಿ ಆಗಮಿಸಿದಲ್ಲಿ ಅವರ ವಿರುದ್ಧ ಪ್ರತಿಭಟನೆ ನಡೆಸುವುದಾಗಿ ಅಸ್ಸಾಂ ವಿದ್ಯಾರ್ಥಿಗಳ ಒಕ್ಕೂಟ (ಎಎಎಸ್ ಯು) ಹೇಳಿಕೆ ನೀಡಿದೆ. ಜನವರಿ 5ರಂದು ನಡೆಯಲಿರುವ ಭಾರತ- ಶ್ರೀಲಂಕಾ ಟಿ 20 ಪಂದ್ಯಾವಳಿಯ ಮೇಲೂ ತಾವು ಕಣ್ಣಿಟ್ಟಿರುವುದಾಗಿ ಅವರು ಒಕ್ಕೂಟ ತಿಳಿಸಿದೆ.