ಬೆಂಗಳೂರು: ಚಂದ್ರಯಾನ –2 ವಿಫಲವಾದಾಗ ತಮ್ಮನ್ನು ಪ್ರಧಾನಿ ಮೋದಿ ತಬ್ಬಿ ಸಂತೈಸಿದ್ದು ಒಂದು ಭಾವನಾತ್ಮಕ ಕ್ಷಣ ಎಂದು ಇಸ್ರೋ ಅಧ್ಯಕ್ಷ ಕೆ.ಸಿವನ್ ತಿಳಿಸಿದ್ದಾರೆ.
ಆ ಸಂದರ್ಭದಲ್ಲಿ ಇಬ್ಬರೂ ಮಾತನಾಡಲಿಲ್ಲ. ಅದೊಂದು ಭಾವುಕ ಗಳಿಗೆಯಾಗಿತ್ತು. ಇಬ್ಬರು ಭಾವುಕ ವ್ಯಕ್ತಿಗಳು ಪರಸ್ಪರ ಆಲಂಗಿಸುವ ಮೂಲಕ ಸಾಂತ್ವನ ಹೇಳಿಕೊಂಡೆವು ಎಂದಿದ್ದಾರೆ.
ಚಂದ್ರಯಾನ – 2 ವೈಫಲ್ಯದ ನಂತರ ಮೋದಿ ಇಸ್ರೋ ಸಿಬ್ಬಂದಿಯನ್ನು ಭೇಟಿ ಮಾಡಿ ಧೈರ್ಯ ತುಂಬಿದ್ದರು. ನಂತರ ಸಭಾಂಗಣದಿಂದ ಹೊರಬಂದಾಗ ಭಾವುಕರಾದ ಸಿವನ್ ಬಿಕ್ಕಿ ಬಿಕ್ಕಿ ಅತ್ತಿದ್ದರು. ಆಗ ಮೋದಿ ಅವರನ್ನು ತಬ್ಬಿ ಸಂತೈಸಿದ್ದರು.