ನವದೆಹಲಿ; ನವದೆಹಲಿಯ ಲೋಕಕಲ್ಯಾಣ ಮಾರ್ಗದಲ್ಲಿದ್ದ ಪ್ರಧಾನಿ ನರೇಂದ್ರ ಮೋದಿ ಅವರ ವಸತಿ ಮತ್ತು ಕಚೇರಿ ಬಳಿಯ ಮಳಿಗೆಯಲ್ಲಿ ಹಠಾತ್ ಬೆಂಕಿ ಕಾಣಿಸಿಕೊಂಡಿದೆ.
ಸಂಜೆ 7.25ರ ಸುಮಾರಿಗೆ ಅಗ್ನಿ ಶಾಮಕ ದಳದ ಸಿಬ್ಬಂದಿಗೆ ಮಾಹಿತಿ ದೊರೆತಿದ್ದು, 9 ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಅಗ್ನಿಯನ್ನು ನಂದಿಸಿದ್ದಾರೆ. ಇನ್ವರ್ಟರ್ ನಿಂದ ಬೆಂಕಿ ಕಾಣಿಸಿಕೊಳ್ಳಲಾಗಿದೆ ಎನ್ನಲಾಗಿದೆ. ಅಗ್ನಿ ಅವಘಡದಿಂದ ಯಾವುದೇ ಹಾನಿಯಾದ ಬಗ್ಗೆ ವರದಿಯಾಗಿಲ್ಲ.