ನವದೆಹಲಿ: ತಮ್ಮ ಮನ್ ಕಿ ಬಾತ್ ನಲ್ಲಿ ಪ್ರಧಾನಿ ನರೇಂದ್ರ ಮೋದಿ ದೇಶದ ಯುವ ಸಮುದಾಯದ ಭಾವನೆ ಮತ್ತು ಪ್ರಾಶಸ್ತ್ಯದ ಬಗ್ಗೆ ಮಾತನಾಡಿದ್ದಾರೆ. ಈ ಮೂಲಕ ಪರೋಕ್ಷವಾಗಿ ದೇಶದಲ್ಲಿ ನಡೆಯುತ್ತಿರುವ ಪೌರತ್ವ ಕಾನೂನು ತಿದ್ದುಪಡಿ ಹೋರಾಟದ ಬಗ್ಗೆ ಕೂಡ ಪ್ರಸ್ತಾಪಿಸಿದ್ದಾರೆ. ದೇಶದ ಯುವ ಸಮುದಾಯ ಅಸ್ಥಿರತೆ, ಅರಾಜಕತೆ ಮತ್ತು ಸ್ವಜನ ಪಕ್ಷಪಾತ ಸಹಿಸಲ್ಲ ಎಂದು ಮೋದಿ ಅಭಿಪ್ರಾಯಪಟ್ಟಿದ್ದಾರೆ.