
ಗುವಾಹಟಿ: ಅಸ್ಸಾಂ ವಿಧಾನಸಭೆಯಲ್ಲಿ ಇಂದು ವಿರೋಧ ಪಕ್ಷ ಕಾಂಗ್ರೆಸ್ ಶಾಸಕ ರೂಪ್‌ಜ್ಯೋತಿ ಕುರ್ಮಿ ಅವರು ತಮ್ಮ ಅಂಗೈಯ ರಕ್ತದಲ್ಲಿ ಸರ್ಕಾರಿ ವಿರೋಧಿ ಘೋಷಣೆಗಳನ್ನು ಬರೆದು ಸುದ್ದಿಯಾಗಿದ್ದಾರೆ.
ಮಂಗಳವಾರ ಸದನ ಬಹಿಷ್ಕರಿಸಿದ ಕುರ್ಮಿ, ಅದರ ಪ್ರವೇಶ ದ್ವಾರದ ಬಳಿ ಕುಳಿತು ಬ್ಲೇಡ್‌ನಲ್ಲಿ ತಮ್ಮ ಎಡ ಅಂಗೈಯ ಮೇಲೆ ಗೀಚಿ, ರಕ್ತದಿಂದ ರಾಜ್ಯದ ಎರಡು ಪೇಪರ್ ಗಿರಣಿಗಳು, ರಸಗೊಬ್ಬರ ಕಾರ್ಖಾನೆ ಮತ್ತು ಎರಡು ಚಹಾ ತೋಟಗಳನ್ನು ಮಾರಾಟ ಮಾಡುವ ಸರ್ಕಾರದ ನಿರ್ಧಾರದ ವಿರುದ್ಧ ಘೋಷಣೆ ಬರೆದಿದ್ದಾರೆ.