ನವದೆಹಲಿ: ದೇಶದಲ್ಲಿ ಗಗನಕ್ಕೇರಿರುವ ಈರುಳ್ಳಿ ಬೆಳೆಯ ಕುರಿತು ರಾಜ್ಯಸಭೆಯಲ್ಲಿ ಮಹತ್ವದ ಚರ್ಚೆ ನಡೆದಿದೆ. ಶೂನ್ಯ ವೇಳೆಯಲ್ಲಿ ಈ ವಿಷಯ ಪ್ರಸ್ತಾಪಿಸಿದ ಸಿಪಿಐ- ಎಂ ಸಂಸದ ಕೆ.ಕೆ.ರಾಗೇಶ್, ದೇಶಾದ್ಯಂತ 32 ಸಾವಿರ ಟನ್ ಈರುಳ್ಳಿ ಕೊಳೆತುಹೋಗುತ್ತಿದೆ. ಇದನ್ನ ತಡೆಯಲು ಕೇಂದ್ರ ಸರ್ಕಾರ ಮಧ್ಯಪ್ರವೇಶಿಸಿ ದರ ಏರಿಕೆಯನ್ನು ತಡೆಯಬೇಕು ಎಂದು ಮನವಿ ಮಾಡಿದ್ದಾರೆ.
ದೇಶದ ವಿವಿಧ ಭಾಗಗಳಲ್ಲಿ ಈರುಳ್ಳಿ ಬೆಲೆ ಕೆಜಿಗೆ ನೂರು ರೂಪಾಯಿ ದಾಟಿದೆ. ದರ ಹೆಚ್ಚಳದಿಂದ ಈರುಳ್ಳಿ ಖರೀದಿಸುವವರು ಕಡಿಮೆಯಾದ್ದರಿಂದ ಸುಮಾರು 32 ಸಾವಿರ ಟನ್ ಈರುಳ್ಳಿ ಕೊಳೆತುಹೋಗುತ್ತಿದೆ. ಇದರಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಸದನದ ಗಮನ ಸೆಳೆದರು.
ರಾಜ್ಯಸಭೆಯಲ್ಲಿ ಈರುಳ್ಳಿ ಬೆಲೆ ಏರಿಕೆ ಕುರಿತು ಚರ್ಚೆ
Follow Us