* ಶೀಘ್ರವೇ ಪೌರತ್ವ ಕಾಯ್ದೆ ಜಾರಿ
ನವದೆಹಲಿ: ಪೌರತ್ವ ತಿದ್ದುಪಡಿ ಮಸೂದೆ ರಾಜ್ಯಸಭೆಯಲ್ಲೂ ಅಂಗೀಕಾರಗೊಂಡಿದೆ.
238 ಒಟ್ಟೂ ಸದಸ್ಯ ಬಲವಿರುವ ರಾಜ್ಯಸಭೆಯಲ್ಲಿ ವಿಧೇಯಕ ಮಂಡನೆ ವೇಳೆ ಹಾಜರಿದ್ದ 230 ಸದಸ್ಯರಲ್ಲಿ ವಿಧೇಯಕದ ಪರವಾಗಿ 125 ಮತಗಳು ಹಾಗೂ ವಿಧೇಯಕದ ವಿರುದ್ದವಾಗಿ 105 ಮತಗಳು ಬಿದ್ದಿವೆ.
ರಾಜ್ಯಸಭೆಯಲ್ಲಿಂದು ಗೃಹಸಚಿವ ಅಮಿತ್ ಷಾ ಅವರು ಮಸೂದೆ ಮಂಡಿಸಿದರು. ಸತತ ಏಳು ಗಂಟೆ ಚರ್ಚೆ ಬಳಿಕ ಬಿಲ್ ಪಾಸ್ ಆಗಿದೆ. ಮುಂದಿನ ಹಂತದಲ್ಲಿ ರಾಷ್ಟ್ರಪತಿಯಿಂದ ಮಸೂದೆಗೆ ಅಂಕಿತ ದೊರೆತ ಕೂಡಲೇ ಕಾಯ್ದೆಯಾಗಿ ಪರಿವರ್ತನೆಯಾಗಲಿದೆ.