ವಯನಾಡ್: ರಾಹುಲ್ ಗಾಂಧಿ ಭಾಷಣವನ್ನು ಮಾತೃಭಾಷೆ ಮಲಯಾಳಂಗೆ ಅನುವಾದಿಸಿದ ವಿದ್ಯಾರ್ಥಿನಿ ಸಫಾ ಫಬಿನ್ ಈಗ ಕೇರಳದಾದ್ಯಂತ ಮನೆ ಮಾತು.
ಅವಳು ರಾಹುಲ್ ಅವರ ಭಾಷಣವನ್ನು ಮಲಯಾಳಂಗೆ ಅನುವಾದಿಸಿದ ವಿಡಿಯೋ ವೈರಲ್ ಆಗಿದೆ. ವಯನಾಡ್ ಕ್ಷೇತ್ರದ ಮಲಪ್ಪುರಂನ ಕರುವಾರಕ್ಕುಂಡು ಗ್ರಾಮದ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯ ವಿಜ್ಞಾನ ವಿಭಾಗದ ಕಟ್ಟಡದ ಉದ್ಘಾಟಿಸಿ ಮಾತಿಗಿಳಿದ ರಾಹುಲ್ ಗಾಂಧಿ, ನನ್ನ ಭಾಷಣವನ್ನು ಯಾರಾದರೂ ಅನುವಾದಿಸುತ್ತೀರಾ ಎಂದು ಪ್ರಶ್ನಿಸಿದ ತಕ್ಷಣ ಪ್ರೇಕ್ಷಕರ ಸಾಲಿನಲ್ಲಿ ಕುಳಿತಿದ್ದ 12 ನೇ ತರಗತಿ ವಿದ್ಯಾರ್ಥಿನಿ ಸಫಾ ಫಬಿನ್ ಎದ್ದು ವೇದಿಕೆಗೆ ತೆರಳಿ ಬೆರಗುಗೊಳಿಸಿದಳು. ರಾಹುಲ್ ಅವರ ಭಾಷಣವನ್ನು ಸರಳವಾಗಿ ಅನುವಾದಿಸಿ ಚಪ್ಪಾಳೆ ಗಿಟ್ಟಿಸಿಕೊಂಡಳು. ಹದಿನೈದು ನಿಮಿಷದ ಅನುವಾದದಲ್ಲಿ ಎಲ್ಲಿಯೂ ಆಕೆ ತಡವರಿಸಲಿಲ್ಲ. ಭಾಷಣದ ಬಳಿಕ ಸಂಸದ ರಾಹುಲ್ ಗಾಂಧಿ ಸಫಾಳನ್ನು ಅಭಿನಂದಿಸಿ ಚಾಕೊಲೇಟ್ ನೀಡಿದರು.
ನನಗೆ ನಂಬಲು ಸಾಧ್ಯವಾಗುತ್ತಿಲ್ಲ. ಅದು ಸಂತಸದ ಸಂಗತಿಯಾಗಿತ್ತು. ನನಗೆ ಹೇಗೆ ಧೈರ್ಯ ಬಂತೋ ಗೊತ್ತಿಲ್ಲ ಎಂದು ಸಫಾ ಹೇಳಿದ್ದಾಳೆ.
ರಾಹುಲ್ ಭಾಷಣ ಅನುವಾದಿಸಿದ ಸಫಾ ಈಗ ಸೂಪರ್ ಸ್ಟಾರ್!
Follow Us