ಮುಂಬೈ: ಮುಂಬೈ ಮಹಾನಗರದಲ್ಲಿ ಲೋಕಲ್ ಟ್ರೈನ್ ಗಳು ಮಹಾ ನಗರದ ಜೀವನಾಡಿ. ಬೆಳಗ್ಗಿನ ಒತ್ತಡದ ಅವಧಿಯಲ್ಲಿ ಇದರಲ್ಲಿ ಸೀಟು ಗಿಟ್ಟಿಸುವುದು ಸಾಹಸ. ಹೀಗೆ ತುಂಬಿ ತುಳುಕುತ್ತಿದ್ದ ರೈಲ್ಲನ್ನು
ಹತ್ತಲು ಹೋಗಿ ಯುವತಿಯೊಬ್ಬಳು ಪ್ರಾಣ ಕಳೆದುಕೊಂಡಿದ್ದಾಳೆ. ಮುಂಬೈನ ಡೊಂಬಿವಿಲಿಯಲ್ಲಿ ಈ ಘಟನೆ ಸಂಭವಿಸಿದೆ. ರೈಲ್ಲಿನ ಒಳಗೆ ಪ್ರವೇಶಿಸಲು ಸಾಧ್ಯವಾಗದೇ ಅದರ ಸರಳನ್ನು ಹಿಡಿದು ನೇತಾಡಿದ್ದ ಯುವತಿ ಚಾರ್ಮಿ ಪ್ರಸಾದ್ ಹಳಿಯ ಮೇಲೆ ಬಿದ್ದಳು. ಗಂಭೀರವಾಗಿ ಗಾಯಗೊಂಡಿದ್ದ ಆಕೆ ಬಳಿಕ ಆಸ್ಪತ್ರೆಗೆ ಕರೆದೊಯ್ಯುವ ವೇಳೆ ಮೃತಪಟ್ಟಳು. 22 ವರ್ಷದ ಚಾರ್ಮಿ ಪ್ರಸಾದ್ ಖಾಸಗಿ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿದ್ದಳು.