ನವದೆಹಲಿ: ಕೇಂದ್ರ ಮೀಸಲು ಪೊಲೀಸ್ ಪಡೆ (ಸಿಆರ್‌ಪಿಎಫ್) ನ ಜವಾನರು ವರ್ಷಕ್ಕೆ 100 ದಿನಗಳ ಕಾಲ ತಮ್ಮ ಕುಟುಂಬ ಸದಸ್ಯರೊಂದಿಗೆ ಕಳೆಯಲು ಅವಕಾಶ ಕಲ್ಪಿಸುವಂತಹ ಆರೋಗ್ಯ ಕಾರ್ಡ್‌ಗಳನ್ನು ನೀಡಲು ಸರ್ಕಾರ ನಿರ್ಧರಿಸಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.
ಸೇನೆಯ ಕೇಡರ್ ಪರಿಶೀಲನೆಯ ನಂತರ ಸುಮಾರು 3,526 ಹುದ್ದೆಗಳನ್ನು ಸೃಷ್ಟಿಸಲಾಗಿದ್ದು, ಇದು ಮುಂದಿನ ದಿನಗಳಲ್ಲಿ ಸೇನೆಯ ಸಿಬ್ಬಂದಿಗೆ ತ್ವರಿತ ಬಡ್ತಿ ಪಡೆಯಲು ಸಹಾಯವಾಗುತ್ತದೆ ಎಂದು ಹೇಳಿದರು. ಸಿಆರ್‌ಪಿಎಫ್ ‘ವೀರ್-ಆ್ಯಪ್’ ಮೂಲಕ ಹುತಾತ್ಮರ ಕುಟುಂಬ ಸದಸ್ಯರಿಗೆ ಸಾಧ್ಯವಿರುವ ಎಲ್ಲ ನೆರವು ನೀಡಲಾಗುವುದು ಎಂದು ಗೃಹ ಸಚಿವರು ತಿಳಿಸಿದ್ದಾರೆ.
ವರ್ಷಕ್ಕೆ 100 ದಿನ ಕುಟುಂಬದೊಂದಿಗಿರಲು ಸಿಆರ್‌ಪಿಎಫ್ ಯೋಧರಿಗೆ ಅವಕಾಶ: ಅಮಿತ್ ಶಾ
Follow Us