ಲಖನೌ: ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಜನ್ಮದಿನ ಹಿನ್ನೆಲೆಯಲ್ಲಿ ವಾಜಪೇಯಿಯವರ ಪ್ರತಿಮೆಯನ್ನು ಪ್ರಧಾನಿ ನರೇಂದ್ರ ಮೋದಿ ಲಖನೌದಲ್ಲಿ ಬುಧವಾರ ಲೋಕಾರ್ಪಣೆ ಮಾಡಲಿದ್ದಾರೆ.
ಲಖನೌದಲ್ಲಿನ ಲೋಕ ಭವನದಲ್ಲಿ ವಾಜಪೇಯಿ ಅವರ ಪ್ರತಿಮೆಯನ್ನು ಪ್ರತಿಷ್ಠಾಪಿಸಲಾಗಿದೆ.
ಇದೇ ವೇಳೆ, ಪ್ರಧಾನಿ ಮೋದಿ ಅಟಲ್ ಬಿಹಾರಿ ವಾಜಪೇಯಿ ಮೆಡಿಕಲ್ ವಿಶ್ವವಿದ್ಯಾಲಯದ ಶಂಕು ಸ್ಥಾಪನೆ ನೆರವೇರಿಸಲಿದ್ದಾರೆ. ವಿವಿಗಾಗಿ ಉತ್ತರಪ್ರದೇಶ ಸರ್ಕಾರ 50 ಎಕರೆ ಭೂಮಿ ನೀಡಲಿದೆ.
ವಾಜಪೇಯಿ ಪ್ರತಿಮೆ ಇಂದು ಲೋಕಾರ್ಪಣೆ
Follow Us